Home ಆರೋಗ್ಯ ಕೊರೊನಾ ವ್ಯಾಕ್ಸಿನ್ 3ನೆ ಹಂತದ ಕ್ಲಿನಿಕಲ್ ಟ್ರಯಲ್ ಗೆ ಮುಖ್ಯಮಂತ್ರಿ ಚಾಲನೆ

ಕೊರೊನಾ ವ್ಯಾಕ್ಸಿನ್ 3ನೆ ಹಂತದ ಕ್ಲಿನಿಕಲ್ ಟ್ರಯಲ್ ಗೆ ಮುಖ್ಯಮಂತ್ರಿ ಚಾಲನೆ

65
0

ಬೆಂಗಳೂರು:

ಕೊರೊನಾ ವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿಂದು ನಡೆದ ಸಭೆಯಲ್ಲಿ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್ ಗೆ ಚಾಲನೆ ನೀಡಿದರು.

IMG 20201202 130246

ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ.

ಆತ್ಮನಿರ್ಬರ್ ಭಾರತದ ಅಡಿಯಲ್ಲಿ ಕೋವಿಡ್ – 19 ರ ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಗೆ ಮುಖ್ಯಮಂತ್ರಿಗಳು ಚಾಲನೆ ನೀಡಿ ಮಾತನಾಡಿ, ಕೊವಿಡ್ ಮಹಾಮಾರಿ ವಿರುದ್ಧ ವೈದೇಹಿ ಸಂಸ್ಥೆ ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆಸುತ್ತಿರುವುದು ಸಂತಸದ ಸುದ್ದಿ. ಕೊವಿಡ್ ಮಹಾಮಾರಿ ತೊಲಗಿಸಲು ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ. ರೋಗ ತಡೆಗಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಕಂಡು ಹಿಡಿಯುವ ಅಗತ್ಯವಿದೆ. ದೇಶದ ಭವಿಷ್ಯಕ್ಕಾಗಿ ಇನ್ನಷ್ಟು ಕಂಪನಿಗಳು ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆಸಲು ಮುಂದೆ ಬರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಡಾ.ಸುಧಾಕರ್.‌ ವೈದೇಹಿ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ.ರಾಜೇಶ್ ನಾಯ್ಡು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here