Home ಬೆಂಗಳೂರು ನಗರ Covid19: 279 positive cases reported in last 24 hours |ಕಳೆದ 24 ಗಂಟೆಯಲ್ಲಿ...

Covid19: 279 positive cases reported in last 24 hours |ಕಳೆದ 24 ಗಂಟೆಯಲ್ಲಿ 279 ಪಾಸಿಟಿವ್ ಕೇಸ್‌ಗಳು ವರದಿ

26
0
Covid

ಬೆಂಗಳೂರು:

ರಾಜ್ಯದಲ್ಲಿ ಕೋವಿಡ್ ಉಪಟಳ ಹೆಚ್ಚಾಗಿದ್ದು, ರಾಜ್ಯದಲ್ಲಿ ಒಟ್ಟು 1222 ಸಕ್ರಿಯ ಕೊವಿಡ್ (Covid19) ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 279 ಪಾಸಿಟಿವ್ ಕೇಸ್‌ಗಳು ವರದಿ ಆಗಿದೆ.

ಕಳೆದ 24 ಗಂಟೆಯಲ್ಲಿ 235 ಮಂದಿ ಕೋವಿಡ್ ನಿಂದಾ ಗುಣಮುಖವಾಗಿದ್ದು, ಮತ್ತೆ ಮೂರು ಮಂದಿಯನ್ನು ಬಲಿ ಪಡೆದುಕೊಂಡಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 4.38% ಕೊವಿಡ್ ಪಾಸಿಟಿವ್ ರೇಟ್ ವರದಿ ಆಗಿದೆ. ಕಳೆದ 24 ಗಂಟೆಯಲ್ಲಿ 6359 ಟೆಸ್ಟ್‌ಗಳನ್ನು ಮಾಡಲಾಗಿದ್ದು 5512 RTCPR ಹಾಗೂ 847 RAT ಟೆಸ್ಟ್‌ಗಳನ್ನ ಮಾಡಲಾಗಿದೆ

ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿ ಆಗಿದೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೂ 593 ಸಕ್ರಿಯ ಕೇಸ್‌ಗಳು ವರದಿ ಆಗಿದೆ. ಒಟ್ಟು 1222 ಸಕ್ರಿಯ ಪ್ರಕರಣಗಳಲ್ಲಿ 1144 ಕೇಸ್‌ಗಳು ಹೋಮ್ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ.

78 ಕೇಸ್‌ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ 18 ಐಸಿಯು ನಲ್ಲಿ ಕೇಸ್‌‌ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 3 ಮಂದಿಗೆ ಐಸಿಯು ವೆಂಟಿಲೇಶನ್ ನಲ್ಲಿ ಚಿಕಿತ್ಸೆ ನೀಡಲಾಗಿದೆ.

LEAVE A REPLY

Please enter your comment!
Please enter your name here