Home Uncategorized CP Yogeshwar; ಎಸ್ ಟಿ ಸೋಮಶೇಖರ್ ಪಕ್ಷ ಬಿಡುವುದಾದರೆ ಬಿಡಲಿ, ಅಭ್ಯಂತರ ಇಲ್ಲ – ಸಿಪಿ...

CP Yogeshwar; ಎಸ್ ಟಿ ಸೋಮಶೇಖರ್ ಪಕ್ಷ ಬಿಡುವುದಾದರೆ ಬಿಡಲಿ, ಅಭ್ಯಂತರ ಇಲ್ಲ – ಸಿಪಿ ಯೋಗೇಶ್ವರ್

14
0

ರಾಮನಗರ;- ಸೋಮಶೇಖರ್ ಪಕ್ಷ ಬಿಡುವುದಾದರೆ ವಿರೋಧವಿಲ್ಲ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ

ಈ ಸಂಬಂಧ ಮಾತನಾಡಿದ ಅವರು,ಎಸ್.ಟಿ.ಸೋಮಶೇಖರ್ ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ. ಬಿಜೆಪಿಗೆ ಬಂದ ಮೇಲೆ ಮಂತ್ರಿಯಾಗಿ ಪ್ರಬಲ ಖಾತೆ ಪಡೆದರು, ಅಧಿಕಾರ ಅನುಭವಿಸಿದರು. ಇವತ್ತು ಅಧಿಕಾರವಿಲ್ಲವೆಂದು ಹೀಗೆ ಮಾತನಾಡುತ್ತಾರೆ.

ಬಹುಶಃ ಅವರು ಎಂಎಲ್‌ಎ ಸ್ಥಾನಕ್ಕೆ ರಾಜಿನಾಮೆ ಕೊಟ್ಟರೆ ಮಾಜಿ ಶಾಸಕ ಆಗಬಹುದು ಇನ್ನೇನು ಆಗಲು ಸಾಧ್ಯವಿಲ್ಲ. ಒಂದು ವೇಳೆ ಹೊರಹೋಗುವ ತೀರ್ಮಾನ ಮಾಡಿದ್ದರೆ ನಮ್ಮ ವಿರೋಧವಿಲ್ಲ, ಸ್ವಾಗತಿಸುತ್ತೇವೆ. ಪದೇ ಪದೇ ಪಕ್ಷಕ್ಕೆ ಮಾಡುವುದು ನಮಗೂ ನೋವು ತರುತ್ತದೆ. ಅಧಿಕಾರವಿದ್ದಾಗ ಅನುಭವಿಸಿ ಇಂದು ಪಕ್ಷದ ವಿರುದ್ಧ ಮಾತನಾಡುವುದು ಶೋಭೆಯಲ್ಲ ಎಂದರು.

ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬಹಳ ವಿರೋಧವಿದ್ದ ಕ್ಷೇತ್ರ ಚನ್ನಪಟ್ಟಣ. ನಾವು, ಕುಮಾರಸ್ವಾಮಿಯನ್ನು ನೇರಾ ನೇರವಾಗಿ ಪರಸ್ಪರ ವಿರೋಧವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೆವು. ಹೊಂದಾಣಿಕೆ ಎನ್ನುವುದು ತಾಳ್ಮೆಯಿಂದ ಪರಸ್ಪರ ಒಂದಾಗಿ ಎಲ್ಲರ ಮನಸ್ಸನ್ನು ಒಗ್ಗೂಡಿಸುವುದು. ಹಾಗಾಗಿ ಇಂದು ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಮ್ಮ ರಾಷ್ಟೀಯ ನಾಯಕರು ತೆಗೆದುಕೊಂಡಿರುವ ನಿರ್ಧಾರವನ್ನು ತಿಳಿಸಲಾಗುವುದು. ಮೈತ್ರಿಯ ಅನಿವಾರ್ಯತೆ ಏನೆಂಬುದು ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಬೂತ್ ಮಟ್ಟದಲ್ಲಿ ಎರಡು ಪಕ್ಷದವರನ್ನು ಒಗ್ಗೂಡಿಸಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.

The post CP Yogeshwar; ಎಸ್ ಟಿ ಸೋಮಶೇಖರ್ ಪಕ್ಷ ಬಿಡುವುದಾದರೆ ಬಿಡಲಿ, ಅಭ್ಯಂತರ ಇಲ್ಲ – ಸಿಪಿ ಯೋಗೇಶ್ವರ್ appeared first on Ain Live News.

LEAVE A REPLY

Please enter your comment!
Please enter your name here