Home Uncategorized Crackers Explosion: ಅತ್ತಿಬೆಲೆ ಪಟಾಕಿ ದುರಂತ: ಜೆಸಿಬಿ ಮೂಲಕ ಗೋಡೌನ್​ ನೆಲಸಮ

Crackers Explosion: ಅತ್ತಿಬೆಲೆ ಪಟಾಕಿ ದುರಂತ: ಜೆಸಿಬಿ ಮೂಲಕ ಗೋಡೌನ್​ ನೆಲಸಮ

18
0

ಬೆಂಗಳೂರು: ಅತ್ತಿಬೆಲೆ ಪಟಾಕಿ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದ ಗೋದಾಮನ್ನು ಅಗ್ನಿಶಾಮಕ ದಳ ಸಿಬ್ಬಂದಿ ಐದಾರು ಜೆಸಿಬಿಗಳ ಮೂಲಕ ಸಂಪೂರ್ಣ ನೆಲಸಮ ಮಾಡಿದ್ದಾರೆ.

CM Janatha Darshana: ಗಮನಿಸಿ: ಸಿಎಂ ಜನತಾ ದರ್ಶನ ಕಾರ್ಯಕ್ರಮ ಮುಂದೂಡಿಕೆ!

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ ಚಿಕಿತ್ಸೆಯ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಘೋಷಿಸಿದ್ದಾರೆ.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಟಾಕಿ ಮಾರಾಟ ಮಾಡುವ ಹಾಗೂ ದಾಸ್ತಾನು ಮಾಡುವ ಜಾಗದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಮುಖ್ಯವಾಗಿ ಇಲ್ಲಿ ಸ್ಪೋಟಕ ಕಾಯ್ದೆ ಉಲ್ಲಂಘನೆಯಾಗಿದ್ದು, ಘಟನೆಯಲ್ಲಿ 14 ಮಂದಿ ಮೃತಪಟ್ಟು, 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣವನ್ನು ನಾವು ಸಿಐಡಿಗೆ ಹಸ್ತಾಂತರಿಸುತ್ತಿದ್ಧೇವೆ. ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ತಪ್ಪು ಮಾಡಿದವರು ಯಾರೇ ಆದರೂ ಅವರನ್ನು ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

The post Crackers Explosion: ಅತ್ತಿಬೆಲೆ ಪಟಾಕಿ ದುರಂತ: ಜೆಸಿಬಿ ಮೂಲಕ ಗೋಡೌನ್​ ನೆಲಸಮ appeared first on Ain Live News.

LEAVE A REPLY

Please enter your comment!
Please enter your name here