Home Uncategorized Crime News: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ನೀರಿಗೆ ತಳ್ಳಿ ಕೊಂದ ಪತಿ

Crime News: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ನೀರಿಗೆ ತಳ್ಳಿ ಕೊಂದ ಪತಿ

25
0

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ನೀರಿಗೆ ತಳ್ಳಿ ಪತಿ ಕೊಲೆ (Murder) ಮಾಡಿರುವಂತಹ ಘಟನೆ ನಿನ್ನೆ(ಡಿ. 4) ಮಧ್ಯಾಹ್ನ ನಡೆದಿದೆ. ನಗರದ ತುರಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೃತ್ಯ ನಡೆದಿದೆ. ಶಿವಮ್ಮ(50) ಕೊಲೆ ದುರ್ದೈವಿ. ಕಳೆದ 2 ವರ್ಷಗಳಿಂದ ಶಿವಮ್ಮ ಅನಾರೋಗ್ಯಕ್ಕೆ ತುತ್ತಾಗಿದ್ದು, ಓಡಾಡಲು ಆಗದ ಪರಿಸ್ಥಿಯಲ್ಲಿದ್ದರು. ಸೆಕ್ಯೂರಿಟಿ ಗಾರ್ಡ್​ ಆಗಿದ್ದ ಪತಿ ಶಂಕರಪ್ಪನಿಂದ ಶಿವಮ್ಮನ ಕೊಲೆ ಮಾಡಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಏರ್​​ಪೋರ್ಟ್​​ ರಸ್ತೆಯಲ್ಲಿ ಟೈರ್ ಸ್ಫೋಟಗೊಂಡು ಕಾರು ಜಖಂ ಗೊಂಡಿರುವಂತಹ ಘಟನೆ ಕೆಂಪೇಗೌಡ ಏರ್​ಪೋರ್ಟ್​ ರಸ್ತೆಯ ಚಿಕ್ಕಜಾಲ ಬಳಿ ನಡೆದಿದೆ. ಬೆಂಗಳೂರು ಕಡೆಯಿಂದ ವಿಮಾನ ನಿಲ್ದಾಣಕ್ಕೆ ಕಾರು ಹೊರಟಿದ್ದ ವೇಳೆ ಅವಘಡ ಉಂಟಾಗಿದೆ. ವಾಹನಗಳ ಸಂಚಾರ ಕಡಿಮೆಯಿದ್ದರಿಂದ ಅನಾಹುತ ತಪ್ಪಿದೆ. ಕ್ಯಾಬ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಖ್ಯಾತ ಉದ್ಯಮಿ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್: ಮಗನ ಹತ್ಯಗೆ ತಂದೆಯಿಂದಲೇ ಸುಪಾರಿ!

ಕೆಟ್ಟುನಿಂತಿದ್ದ ಲಾರಿಯ ಹಿಂಭಾಗಕ್ಕೆ ಲಗೇಜ್ ಕ್ಯಾರಿಯರ್ ಡಿಕ್ಕಿ; ಓರ್ವ ವ್ಯಕ್ತಿ ಸಾವು

ಕಾರವಾರ: ಕೆಟ್ಟುನಿಂತಿದ್ದ ಲಾರಿಯ ಹಿಂಭಾಗಕ್ಕೆ ಲಗೇಜ್ ಕ್ಯಾರಿಯರ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಮಿರ್ಜಾನ್ ಬಳಿ ನಡೆದಿದೆ. ಧಾರವಾಡ ಮೂಲದ ಇಸ್ಮಯಲ್ ರೋಣದ್​ ಮೃತ ವ್ಯಕ್ತಿ. ಧಾರವಾಡದಿಂದ ಕುಮಟಾಕ್ಕೆ ಬಿಸಿಎಮ್ ಹಾಸ್ಟೆಲ್​ಗೆ ಲಗೇಜ್ ಕ್ಯಾರಿಯರ್ ಆಹಾರ ಸಾಮಗ್ರಿ ತರಲಾಗುತ್ತಿತ್ತು. ಅತೀ ವೇಗದಿಂದ ಬಂದು ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಗಾಯವಾಗಿದ್ದು. ಲಗೇಜ್ ಕ್ಯಾರಿಯರ್ ಸಹಾಯಕ ಸಾವನ್ನಪ್ಪಿದ್ದಾನೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ 36 ವರ್ಷದ ವ್ಯಕ್ತಿಯ ಶವ ಪತ್ತೆ

ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ 36 ವರ್ಷದ ವ್ಯಕ್ತಿಯ ಶವ ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರನ್ನು ಎಎಸ್ ಮಹಾಂತೇಶ್ ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆಯವರಾದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರು ನವೆಂಬರ್ 30ರಂದು ಬೆಂಗಳೂರಿನಿಂದ ತೊಕ್ಕೊಟ್ಟಿಗೆ ಪ್ರಯಾಣ ಬೆಳೆಸಿದ್ದರು ಮತ್ತು ಎನ್‌ಹೆಚ್ 66 ರ ಪಕ್ಕದಲ್ಲಿರುವ ಕಾಪಿಕಾಡ್‌ನಲ್ಲಿರುವ ಲಾಡ್ಜ್‌ನಲ್ಲಿ ತಂಗಿದ್ದಾರೆ. ಅದೇ ರಾತ್ರಿ ಅವರು ಲಾಡ್ಜ್‌ನಿಂದ ಹೊರಗೆ ಹೋಗಿದ್ದಾರೆ ಆದರೆ ಹಿಂತಿರುಗಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here