ಬೆಂಗಳೂರಿನ ಜಿಪಿ ನಗರದಲ್ಲಿ 67 ವರ್ಷದ ಉದ್ಯಮಿ ಬಾಲ ಸುಬ್ರಮಣಿಯನ್ ದೇಹವು ಸ್ಟಿಕ್ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ, ಇದೀಗ ಈ ಪ್ರಕರಣಕ್ಕೆ ಒಂದು ಇನ್ಟ್ರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ. ಒಬ್ಬ ವ್ಯಕ್ತಿಗೆ ಹೇಗೆಲ್ಲ ಸಾವು ಬರುತ್ತದೆ ಎಂಬುದಕ್ಕೆ ಇದು ಉದಾಹರಣೆ, ಸಂಭೋಗದ ಆಸೆಯಿಂದ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಉದ್ಯಮಿ ಬಾಲ ಸುಬ್ರಮಣಿಯನ್ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ದೊಡ್ಡ ಸುಳಿವು ಸಿಕ್ಕಿದೆ. ಹೌದು ಉದ್ಯಮಿ ಬಾಲ ಸುಬ್ರಮಣಿಯನ್ ತನ್ನ ಮನೆಕೆಲಸದ ಮಹಿಳೆಯ ಜೊತೆಗೆ ಲೈಂಗಿಕ ಕ್ರಿಯೆ ಮಾಡುತ್ತಿರುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
67 ವರ್ಷದ ಉದ್ಯಮಿ ತನ್ನ (35) ಮನೆಕೆಲಸದ ಮಹಿಳೆಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇತನು ನವೆಂಬರ್ 16 ರಂದು ತನ್ನ ಮನೆಕೆಲಸದ ಮಹಿಳೆಯ ಮನೆಗೆ ಭೇಟಿ ನೀಡಿದ್ದ ಮತ್ತು ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿದ್ದಾರೆ.
ಬಾಲ ಸುಬ್ರಮಣಿಯನ್ ನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ತರಗತಿಗೆ ಬಿಡಲು ಮನೆಯಿಂದ ಹೊರಟಿದ್ದರು. ಸಂಜೆ 4.55 ರ ಸುಮಾರಿಗೆ ಬಾಲ ಸುಬ್ರಮಣಿಯನ್ ತನ್ನ ಸೊಸೆಗೆ ಕರೆ ಮಾಡಿ ನಾನು ಬರುವುದು ತಡವಾಗುತ್ತದೆ, ನನಗೆ ಕೆಲವು ವೈಯಕ್ತಿಕ ಕೆಲಸ ಇದೆ ನೀನು ಮಗವನ್ನು ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.
ಇದನ್ನು ಓದಿ: ಬೆಂಗಳೂರು: ಮೊಮ್ಮಗನನ್ನ ಬ್ಯಾಡ್ಮಿಂಟನ್ ಕ್ಲಾಸ್ಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ನಾಪತ್ತೆ, ಇಂದು ಶವವಾಗಿ ಪತ್ತೆ
ಸಮಯವಾದರೂ ಬಾಲ ಸುಬ್ರಮಣಿಯನ್ ಮನೆ ಬರೆದಿದ್ದನ್ನು ಕಂಡು ಬಾಲ ಸುಬ್ರಮಣಿಯನ್ ಮಗ, ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಪತ್ತೆಯಾದ ಒಂದು ದಿನದ ನಂತರ ಪೊಲೀಸರಿಗೆ ಒಂದು ಅನುಮಾನಾಸ್ಪದ ಸ್ಥಿತಿಯಲ್ಲಿ ಪ್ಲಾಸ್ಟಿಕ್ ಕವರ್ ಮತ್ತು ಬೆಡ್‌ಶೀಟ್‌ನಲ್ಲಿ ಪ್ಯಾಕ್ ಆಗಿರುವ ಶವ ಪತ್ತೆಯಾಗಿದೆ.
ಈ ಘಟನೆ ಬಯಲಿಗೆ ಬಂದರೆ ಸಮಾಜದಲ್ಲಿ ತನ್ನ ವರ್ಚಸ್ಸು ಹಾಳಾಗುತ್ತದೆ ಎಂದು ಹೆದರಿದ ಮನೆಕೆಲಸದ ಮಹಿಳೆ ಕೂಡಲೇ ಪತಿ ಹಾಗೂ ಸಹೋದರನಿಗೆ ಕರೆ ಮಾಡಿದ್ದಾಳೆ. ಮಹಿಳೆ ಮತ್ತು ಆಕೆಯ ಸಹೋದರ, ಗಂಡ ಸೇರಿ ಬಾಲ ಸುಬ್ರಮಣಿಯನ್ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಜೆಪಿ ನಗರದ ನಿಗೂಢ ಸ್ಥಳದಲ್ಲಿ ಎಸೆದಿದ್ದಾರೆ.
ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಈ ಬಗ್ಗೆ ಒಪ್ಪಿಕೊಂಡಿದ್ದಾಳೆ. ಪೊಲೀಸರು ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಮನೆಯವರು ಆತಂಕಗೊಂಡಿದ್ದರಿಂದ ಪತಿ ಮತ್ತು ಸಹೋದರನ ಸಹಾಯದಿಂದ ಶವವನ್ನು ರಸ್ತೆಯಲ್ಲಿ ಎಸೆದಿದ್ದಾಳೆ. ಬಾಲ ಸುಬ್ರಮಣಿಯನ್ ತನ್ನ ಮನೆಕೆಲಸದ ಮಹಿಳೆಯೊಂದಿಗೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದನು ಮತ್ತು ಅವನು ವಾರಕ್ಕೆ ಎರಡು ಬಾರಿ ಅವಳ ಮನೆಗೆ ಭೇಟಿ ನೀಡುತ್ತಿದ್ದನು ಎಂದು ತಿಳಿದು ಬಂದಿದೆ. ಬಾಲ ಸುಬ್ರಮಣಿಯನ್ ಕಳೆದ ವರ್ಷ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಉದ್ಯಮಿ ನಿಜವಾಗಿಯು ಹೃದಯಾಘಾತ ಸಾವನ್ನಪ್ಪಿದ್ದಾನೆ ಎಂದು ಆತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ