Home Uncategorized Critics Choice Awards 2023: ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್​ನ 5 ವಿಭಾಗಗಳಲ್ಲಿ ನಾಮಿನೇಟ್​ ಆದ ‘ಆರ್​ಆರ್​ಆರ್​’...

Critics Choice Awards 2023: ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್​ನ 5 ವಿಭಾಗಗಳಲ್ಲಿ ನಾಮಿನೇಟ್​ ಆದ ‘ಆರ್​ಆರ್​ಆರ್​’ ಸಿನಿಮಾ

30
0

ನಿರ್ದೇಶಕ ರಾಜಮೌಳಿ (SS Rajamouli) ಅವರ ‘ಆರ್​ಆರ್​ಆರ್​’ ಸಿನಿಮಾ ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟಿದೆ. ಇತ್ತೀಚೆಗಷ್ಟೇ ‘ಗೋಲ್ಡನ್​ ಗ್ಲೋಬ್​ ಅವಾರ್ಡ್’ನ ಎರಡು ವಿಭಾಗಗಳಿಗೆ ಈ ಸಿನಿಮಾ ನಾಮಿನೇಟ್​ ಆದ ಸುದ್ದಿ ಕೇಳಿ ಫ್ಯಾನ್ಸ್​ ಖುಷಿ ಆಗಿದ್ದರು. ಈಗ ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯಾಗ ‘ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ 2023’ (Critics Choice Awards 2023) ಮೇಲೆ ಈ ಸಿನಿಮಾ ದೃಷ್ಟಿ ಹರಿಸಿದೆ. ಒಟ್ಟು 5 ವಿಭಾಗಗಳಲ್ಲಿ ನಾಮಿನೇಟ್​ ಆಗುವ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ರಾಮ್​ ಚರಣ್​, ಜೂನಿಯರ್ ಎನ್​ಟಿಆರ್​, ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸಿರುವ ‘ಆರ್​ಆರ್​ಆರ್​’ (RRR Movie) ಸಿನಿಮಾಗೆ ಅಂತಿಮವಾಗಿ ಯಾವೆಲ್ಲ ಪ್ರಶಸ್ತಿಗಳು ಒಲಿಯಲಿವೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

‘ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ 2023’ರ ನಾಮಿನೇಷನ್ ಪಟ್ಟಿಯನ್ನು ಬುಧವಾರ (ಡಿ.14) ಘೋಷಣೆ ಮಾಡಲಾಯಿತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ, ಅತ್ಯುತ್ತಮ ವಿಶ್ಯವಲ್​ ಎಫೆಕ್ಟ್ ಹಾಗೂ ಅತ್ಯುತ್ತಮ ಹಾಡು ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಸಿನಿಮಾ ನಾಮಿನೇಟ್​ ಆಗಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?

2022ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ‘ಆರ್​ಆರ್​ಆರ್’ ಚಿತ್ರ ಬ್ಲಾಕ್​ ಬಸ್ಟರ್​ ಹಿಟ್​ ಎನಿಸಿಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಸೈ ಎನಿಸಿಕೊಂಡಿದೆ. ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುವತ್ತ ಈ ಸಿನಿಮಾ ಗುರಿ ಇಟ್ಟುಕೊಂಡಿದೆ. ಸ್ವತಂತ್ರವಾಗಿ ಆಸ್ಕರ್​ ಪ್ರಶಸ್ತಿಗೂ ನಾಮನಿರ್ದೇಶನಗೊಳ್ಳಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: Oscars 2023 Nominations: ಆಸ್ಕರ್​ಗೆ ‘ಆರ್​ಆರ್​ಆರ್​’ ನಾಮಿನೇಟ್? ಸೃಷ್ಟಿಯಾಗಲಿದೆ ಹೊಸ ದಾಖಲೆ

2023ರ ಜನವರಿಯಲ್ಲಿ ‘ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​’ ಸಮಾರಂಭ ನಡೆಯಲಿದೆ. 5 ವಿಭಾಗಗಳ ಪೈಕಿ ಯಾವೆಲ್ಲ ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಪ್ರಶಸ್ತಿ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹಲವು ಪ್ರಶಸ್ತಿಗೆ ಈ ಚಿತ್ರ ನಾಮಿನೇಟ್​ ಆಗುತ್ತಿರುವುದರಿಂದ ವಿಶ್ವಾದ್ಯಂತ ಇರುವ ಸಿನಿಪ್ರಿಯರು ಈ ಚಿತ್ರದ ಬಗ್ಗೆ ಗಮನ ಹರಿಸುತ್ತಿದ್ದಾರೆ.

‘ಗೋಲ್ಡನ್​ ಗ್ಲೋಬ್​​ ಅವಾರ್ಡ್ಸ್​ 2023’:

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆಯಲು ‘ಆರ್​ಆರ್​ಆರ್​’ ಚಿತ್ರ ಪ್ರಯತ್ನಿಸುತ್ತಿದೆ. 2 ವಿಭಾಗಗಳಲ್ಲಿ ಈ ಸಿನಿಮಾ ನಾಮಿನೇಟ್​ ಆಗಿದೆ. ‘ಇಂಗ್ಲಿಷ್​ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಪೈಪೋಟಿ ನೀಡುತ್ತಿದೆ. ಈ ಸುದ್ದಿ ಕೇಳಿ ರಾಜಮೌಳಿ ಫ್ಯಾನ್ಸ್​ ಖುಷಿ ಆಗಿದ್ದಾರೆ. ‘ಹಾಲಿವುಡ್​ ಫಾರಿನ್​ ಪ್ರೆಸ್​ ಅಸೋಸಿಯೇಷನ್​’ ಮೂಲಕ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ನೀಡಲಾಗುತ್ತದೆ. ಅಮೆರಿಕದ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here