ಬೆಂಗಳೂರು;- ಪಟಾಕಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿ ಎಂದು ಮಾಜಿ ಶಾಸಕ ಸಿ ಟಿ ರವಿ ಆಗ್ರಹಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅತ್ತಿಬೆಲೆಯಲ್ಲಿ 14 ಜನ ಪ್ರಾಣ ಕಳೆದುಕೊಂಡಿರುವುದು ದುರಂತ. ಮೃತರ ಕುಟುಂಬಸ್ಥರಿಗೆ ದು:ಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ. ಇಲ್ಲಿ ಮಾಲೀಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜನವಸತಿ ಪ್ರದೇಶದಲ್ಲಿ ಪಟಾಕಿಗಳ ಸಂಗ್ರಹಕ್ಕೆ ಅನುಮತಿ ಕೊಟ್ಟಿದ್ದೇಕೆ? ಮೃತರು ಕೂಲಿ ಕಾರ್ಮಿಕರು, ಇಂಥ ಅನಾಹುತ ಬೇರೆಲ್ಲೂ ಆಗದಂತೆ ತಡೆಯುವುದು ಸರ್ಕಾರದ ಕರ್ತವ್ಯ ಎಂದರು.
ಲಿಂಗಾಯತರ ಕಡೆಗಣನೆ ಬಗ್ಗೆ ಶಾಮನೂರು ಶಿವಶಂಕರಪ್ಪ ಆರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಕಾಂಗ್ರೆಸ್‌ನಲ್ಲಿ ಈಗ ಜಾತಿ ಗಣತಿ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಜಾತಿ ಲೇಬಲ್ ಹಾಕಿ ಪೋಸ್ಟಿಂಗ್ ಕೊಡುತ್ತಿದ್ದಾರೆ. ಇದು ಯಾವ ಸೀಮೆ ಜಾತ್ಯತೀತತೆ..? ಜಾತಿ ಮೇಲೆ ಪೋಸ್ಟಿಂಗ್ ಕೊಡೋದು ಏನಿದು? ಇಷ್ಟಾದ ಮೇಲೂ ಇವರು ಜಾತ್ಯತೀತರಾ? ಎಂದು ಪ್ರಶ್ನಿಸಿರುವ ಸಿ ಟಿ ರವಿ ಇದು ವಿಶ್ವಾಸಾರ್ಹತೆ ಇಲ್ಲದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
The post CT Ravi; ಅತ್ತಿಬೆಲೆ ಪಟಾಕಿ ದುರಂತ, 14 ಜನ ಸಾವು- ಇದು ದುರಂತದ ಸಂಗತಿ ಎಂದ ಸಿಟಿ ರವಿ appeared first on Ain Live News.