ದಾವಣಗೆರೆ: ಕಾಂಗ್ರೆಸ್ನವರಿಗೆ ಕೇಸರಿ ಅಂದ್ರೆ ಆಗಲ್ಲ. ಆದರೆ, ಮುಸ್ಲಿಮರ ಟೋಪಿಯನ್ನು ಆನಂದವಾಗಿ ಹಾಕಿಕೊಳ್ಳುತ್ತಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಬಿಜೆಪಿಯವರು ನಕಲಿ ಹಿಂದೂಗಳು ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಪ್ರತಿಕ್ರಿಯಿಸಿ, ಹೌದು, ನಾವು ನಕಲಿ ಹಿಂದೂಗಳು. ಹೀಗಾಗಿಯೇ ಹಣೆಗೆ ತಿಲಕ ಇಟ್ಟುಕೊಳ್ಳುತ್ತೇವೆ. ಕೇಸರಿ ಪೇಟ ತೊಟ್ಟುಕೊಳ್ಳುತ್ತೇವೆ. ಅಸಲಿ ಹಿಂದೂಗಳು ಕುಂಕುಮ, ಕೇಸರಿ ಪೇಟ ಬೇಡ ಅಂತಾರೆ.
ಮುಸ್ಲಿಮರ ಟೋಪಿಯನ್ನು ಆನಂದವಾಗಿ ಹಾಕಿಕೊಳ್ಳುತ್ತಾರೆ. ಕೇಸರಿ ಅಂದ್ರೆ ಇವರಿಗೆ ಆಗಲ್ಲ. ಇಂತಹವರು ನಾಳೆ ಒಸಾಮ ಬಿನ್ ಲಾಡೆನ್ ಪರವಾಗಿ ಮಾತನಾಡಿದರೂ ಆಶ್ಚರ್ಯವಿಲ್ಲ ಎಂದು ವ್ಯಂಗ್ಯವಾಡಿದರು. ಶಿವಮೊಗ್ಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ತೂರಿದವರನ್ನು ಹಾಗೂ ಕಲ್ಲೇಟು ತಿಂದವರನ್ನು ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಕಾಂಗ್ರೆಸ್ ಸರ್ಕಾರ ಮಾರ್ಜಾಲ ನ್ಯಾಯ ಅನುಸರಿಸುತ್ತಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಔರಂಗಜೇಬ,
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
ಟಿಪ್ಪು ಸುಲ್ತಾನ್ ಫೋಟೋ ಹಾಕಲು ಅವಕಾಶ ಕೊಟ್ಟಿದ್ದೇ ತಪ್ಪು. ಪ್ರಕರಣದಲ್ಲಿ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳದೆ, ದೌರ್ಜನ್ಯಕ್ಕೊಳಗಾದವರಿಗೆ ಕಿರುಕುಳ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು. ಇದರಿಂದ ಮತಾಂಧತೆಗೆ ಸರ್ಕಾರವೇ ಉತ್ತೇಜನ ನೀಡುವಂತಾಗುತ್ತದೆ. ಪ್ರಕರಣ ಕುರಿತು ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
The post CT Ravi: ಅಸಲಿ ಹಿಂದೂಗಳು ಕುಂಕುಮ, ಕೇಸರಿ ಪೇಟ ಬೇಡ ಅಂತಾರೆ: ಮಾಜಿ ಸಚಿವ ಸಿ.ಟಿ.ರವಿ appeared first on Ain Live News.
