ಬೆಂಗಳೂರು:
ಅಬುಧಾಬಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಚೆನ್ನೈಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬನಿಂದ 30 ಐಫೋನ್, 28 ಲ್ಯಾಪ್ಟಾಪ್ಗಳು ಮತ್ತು ಕ್ರೆಡಿಟ್ ಕಾರ್ಡ್ನಲ್ಲಿ ಇರಿಸಲಾಗಿದ್ದ 55 ಗ್ರಾಂ ಚಿನ್ನಾಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆಪ್ಟೆಂಬರ್ 17ರಂದು ಇವುಗಳನ್ನು ವಶಪಡಿಸಿಕೊಳ್ಳಲಾಗಿದ್ದು. ಪ್ರಯಾಣಿಕನ ವಿರುದ್ಧ ಕಸ್ಟಮ್ಸ್ ಆಕ್ಟ್, 1962 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪ್ರಯಾಣಿಕರು ನೀಡಿದ ಮಾಹಿತಿಯ ಆಧಾರದ ಮೇಲೆ ಬ್ಯಾಗೇಜ್ ಬೆಲ್ಟ್ನಿಂದ ಲಗೇಜ್ ನ್ನು ತಡೆದಿದ್ದಾರೆ. ಈ ವೇಳೆ ತಪಾಸಣೆ ನಡೆಸಲಾಗಿದ್ದು, ಚಿನ್ನಾಭರಣ, ಲ್ಯಾಪ್ ಟಾಪ್ ಹಾಗೂ ಐಫೋನ್ ಗಳು ಪತ್ತೆಯಾಗಿದೆ.ಚೆನ್ ಹಾಗೂ ಹ್ಯಾಂಡ್ ಬ್ಯಾಗೇಜ್ ನಲ್ಲಿ ಈ ವಸ್ತುಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
#IndianCustomsAtWork 17.09.2023: On specific intel, pax carrying 55.60gm gold concealed as credit card,28 laptops and 30 iPhones was intercepted in Bengaluru airport. He was boarding a domestic flight to Chennai.Pax arrived in B'luru from Abu Dhabi via Ahmedabad. Goods seized. pic.twitter.com/z4JSrbYHxi
— Bengaluru Customs (@blrcustoms) September 22, 2023