ಬೆಂಗಳೂರು:
ವಿದೇಶದಿಂದ ನಗರಕ್ಕೆ ಸರಬರಾಜಾಗಿದ್ದ ಎರಡು ಗಾಂಜಾ ಪ್ರಕರಣಗಳನ್ನು ಭೇದಿಸುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ವಿದೇಶಿ ಅಂಚೆ ಕಚೇರಿಯಲ್ಲಿ ಅಂದಾಜು ರೂ. 1.25 ಕೋಟಿ ರೂ. ಮೌಲ್ಯದ 2.345 ಕೆಜಿ ಎಂಡಿಎಂಎ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ಅಂಚೆ ಕಚೇರಿ, ಬೆಂಗಳೂರು ನಗರ ಕಸ್ಟಮ್ಸ್ ಕಮಿಷನರೇಟ್, ಅಂದಾಜು ರೂ. 1.25 ಕೋಟಿ ಮೌಲ್ಯದ 2.345 ಕೆಜಿ ಎಂಡಿಎಂಎ ಯನ್ನು ಪತ್ತೆ ಮಾಡಿದೆ. "ಫೂಟ್ ಮಸಾಜರ್" ಒಳಗೆ ಮರೆಮಾಡಲಾಗಿರುವ ಇದನ್ನು ಫ್ರಾನ್ಸ್‌ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸಲಾಗಿದೆ. https://t.co/IzS3foISFg
— Bengaluru Customs (@blrcustoms) November 12, 2020
“ಫೂಟ್ ಮಸಾಜರ್” ಒಳಗೆ ಎಂಡಿಎಂ ಪತ್ತೆ ಯಾಗಿದ್ದು, ಇದನ್ನು ಫ್ರಾನ್ಸ್‌ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಆಟಿಕೆ ಸಾಮಾನುಗಳಲ್ಲಿ ಸರಬರಾಜು ಆಗಿದ್ದ 230 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.