ಕಾಡು-ಮೇಡು-ಪ್ರಕೃತಿ-ಪ್ರಾಣಿ-ಪಕ್ಷಿಗಳು ಅಂದರೆ ದರ್ಶನ್ ಅವರಿಗೆ ಅಚ್ಚುಮೆಚ್ಚು. ಅದರಂತೆಯೇ ಈ ಬಾರಿ ಡಿ ಬಾಸ್ ವಿರಾಟಪೇಟೆ ಕಾಡನ್ನು ಸುತ್ತಿಬಂದಿದ್ದು, ಪುತ್ರ ವಿನೀಶ್ ದರ್ಶನ್ಗೂ ಅರಣ್ಯದ ಸೊಬಗನ್ನು ದರ್ಶನ ಮಾಡಿಸಿದ್ದಾರೆ.
ದರ್ಶನ್ ಜಾಲಿ ರೈಡ್ ಮೂಡ್ನಲ್ಲಿದ್ದಾರೆ. ಕಾಟೇರ ಸಿನಿಮಾದ ಬಿಡುವಿಲ್ಲದ ಶೂಟಿಂಗ್ ನಡುವೆ ಒಂಚೂರು ಬಿಡುವು ಸಿಕ್ಕಿದ್ದೇ ತಡ ದಚ್ಚು ತಮ್ಮ ‘ಗಜ’ಪಡೆ ಸಮೇತ ವಿರಾಜಪೇಟೆ ಅರಣಕ್ಕೆ ಜಾಲಿರೈಡ್ ಹೋಗಿದ್ದಾರೆ. ವಿಶೇಷ ಅಂದ್ರೆ ದರ್ಶನ್ ಅವರ ಆಫ್ ರೋಡ್ ಟ್ರಿಪ್ನಲ್ಲಿ ಪುತ್ರ ವಿನೀಶ್ ಕೂಡ ಸಾಥ್ ಕೊಟ್ಟಿದ್ದಾರೆ.
ದರ್ಶನ್ ಬಿಡುವು ಸಿಕ್ಕಾಗೆಲ್ಲಾ ಇಂಥ ಸಾಹಸಯಾತ್ರೆಗಳಿಗೆ ಹೋಗ್ತಾನೇ ಇರುತ್ತಾರೆ. ಇದೀಗ ತಮ್ಮ ಪುತ್ರನಿಗೂ ಈ ಸಾಹಸಯಾತ್ರೆಯ ದರ್ಶನ ಮಾಡಿಸಿದ್ದಾರೆ ಡಿ ಬಾಸ್. ಸ್ನೇಹಿತರ ಜೊತೆಗೆ ಮಡಿಕೇರಿಯ ವಿರಾಜಪೇಟೆ ಕಾಡಿಗೆ ಆಫ್ ರೋಡ್ ಟ್ರಿಪ್ ಹೋಗಿರೋ ದಚ್ಚು ದಟ್ಟ ಕಾಡಿನ ನಡುವೆ ಟೆಂಟ್ ಹಾಕ್ಕೊಂದು ಪ್ರಕೃತಿ ನಡುವೆ ಸಮಯ ಕಳೆದಿದ್ದಾರೆ.
ಆಫ್ ರೋಡ್ ಟ್ರಿಪ್ ಹೇಳಿ ಮಾಡಿಸಿರೋ ದರ್ಶನ್ ಜೀಪು , ಅವರನ್ನ ಹಿಂಬಾಲಿಸೋ ಗೆಳೆಯರ ಕಾರುಗಳು ಟೋಟಲಿ ಈ ಜರ್ನಿ ಸಖತ್ ಸಾಹಸಮಯವಾಗಿದೆ. ಹೀಗೆ ಕಾಡು ಮೇಡು ಸುತ್ತೋದು ಸಾಹಸಗಳನ್ನ ಮಾಡೋದು, ನೇಚರ್ ಫೋಟೋಗ್ರಫಿ ದರ್ಶನ್ ಅವರಿಗೆ ಬಲುಇಷ್ಟ. ಆಗಾಗ ಇಂಥ ಟ್ರಿಪ್ಗಳನ್ನು ಮಾಡುವ ದರ್ಶನ್, ಅದನ್ನ ಫ್ಯಾನ್ಸ್ ಜೊತೆಗೆ ಹಂಚಿಕೊಳ್ತಾ ಇರ್ತಾರೆ. ಈ ಬಾರಿ ಡಿ ಬಾಸ್ ಜೊತೆ ಮರಿ ವಿ ಬಾಸ್ರನ್ನ ನೋಡಿ ದಾಸನ ಸೆಲೆಬ್ರೆಟಿಗಳು ಫುಲ್ ಖುಷ್ ಆಗಿದ್ದಾರೆ.
The post D Boss Offroad Trip: ವಿರಾಜಪೇಟೆಯ ದಟ್ಟ ಕಾಡಲ್ಲಿ ಮಗನ ಜೊತೆ ಡಿ ಬಾಸ್ ಆಫ್ ರೋಡ್ ಟ್ರಿಪ್ appeared first on Ain Live News.