Home ಆರೋಗ್ಯ 2 ರಿಂದ 18 ವರ್ಷ ವಯೋಮಾನದವರ ಮೇಲೆ ʼಕೋವ್ಯಾಕ್ಸಿನ್‌ʼ 2/3 ನೇ ಹಂತದ ಚಿಕಿತ್ಸಾತ್ಮಕ ಪ್ರಯೋಗ...

2 ರಿಂದ 18 ವರ್ಷ ವಯೋಮಾನದವರ ಮೇಲೆ ʼಕೋವ್ಯಾಕ್ಸಿನ್‌ʼ 2/3 ನೇ ಹಂತದ ಚಿಕಿತ್ಸಾತ್ಮಕ ಪ್ರಯೋಗ ನಡೆಸಲು ಅನುಮೋದನೆ ನೀಡಿದ ಡಿಸಿಜಿಐ

64
0

525 ಆರೋಗ್ಯವಂತ ಸ್ವಯಂಸೇವಕರ ಮೇಲೆ ಪ್ರಯೋಗಗಳನ್ನು ನಡೆಸಲಿರುವ ಮೆಸ್ಸರ್ಸ್‌ ಭಾರತ್ ಬಯೋಟೆಕ್

ನವ ದೆಹಲಿ:

ಭಾರತದ ಅತ್ಯುನ್ನತ ಔಷಧ ನಿಯಂತ್ರಣ ಪ್ರಾಧಿಕಾರವಾದ ʻಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾʼ (ಡಿಸಿಜಿಐ), ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ 2ರಿಂದ 18 ವರ್ಷ ವಯೋಮಾನದವರ ಮೇಲೆ ಕೊವಾಕ್ಸಿನ್ (ಕೋವಿಡ್ ಲಸಿಕೆ) 2/3ನೇ ಚಿಕಿತ್ಸಾತ್ಮಕ ಪ್ರಯೋಗ ನಡೆಸುವ ಕುರಿತಾಗಿ ವಿಷಯ ತಜ್ಞರ ಸಮಿತಿಯ (ಎಸ್‌ಇಸಿ) ಶಿಫಾರಸನ್ನು ಅಂಗೀಕರಿಸಿದ್ದು, ಈ ನಿಟ್ಟಿನಲ್ಲಿ ಮುಂದುವರಿಯಲು ಲಸಿಕೆ ತಯಾರಿಕಾ ಸಂಸ್ಥೆ ಭಾರತ್‌ ಬಯೋಟೆಕ್‌ಗೆ 12.05.2021ರಂದು ಅನುಮತಿ ನೀಡಿದೆ.

ಹೈದರಾಬಾದ್‌ನ ಮೆಸ್ಸರ್ಸ್‌ ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) 2ರಿಂದ 18 ವರ್ಷ ವಯಸ್ಸಿನವರ ಮೇಲೆ ಕೊವಾಕ್ಸಿನ್‌ನ 2/3 ನೇ ಹಂತದ ಚಿಕಿತ್ಸಾತ್ಮಕ ಪ್ರಯೋಗವನ್ನು ನಡೆಸಲು ಪ್ರಸ್ತಾಪಿಸಿತ್ತು. ಈ ಪ್ರಯೋಗವನ್ನು 525 ಆರೋಗ್ಯವಂತ ಸ್ವಯಂಸೇವಕರ ಮೇಲೆ ನಡೆಸಲಾಗುತ್ತದೆ.

ಈ ಪ್ರಯೋಗದಲ್ಲಿ, 0 ನೇ ದಿನ ಮತ್ತು 28 ನೇ ದಿನದಗಳಂದು ತಲಾ ಒಂದು ಡೋಸ್‌ನಂತೆ ಒಟ್ಟು ಎರಡು ಡೋಸ್‌ಗಳಲ್ಲಿ ಚರ್ಮದ ಕೆಳಭಾಗಕ್ಕೆ ಚುಚ್ಚುಮದ್ದು ರೂಪದಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ.

ತ್ವರಿತ ನಿಯಂತ್ರಣ ಪ್ರತಿಕ್ರಿಯೆಯ ಭಾಗವಾಗಿ, ಈ ಪ್ರಸ್ತಾಪವನ್ನು ವಿಷಯ ತಜ್ಞರ ಸಮಿತಿಗೆ (ಎಸ್ಇಸಿ) (ಕೋವಿಡ್-19) ಸಲ್ಲಿಸಲಾಗಿತ್ತು. ಸಮಿತಿಯು ವಿಸ್ತೃತ ಚರ್ಚೆಯ ಬಳಿಕ 11.05.2021 ರಂದು ಕೆಲವು ಷರತ್ತುಗಳಿಗೆ ಉದ್ದೇಶಿತ 2/3ನೇ ಹಂತದ ಚಿಕಿತ್ಸಾತ್ಮಕ ಪ್ರಯೋಗವನ್ನು ನಡೆಸಲು ಅನುಮತಿ ನೀಡಲು ಶಿಫಾರಸು ಮಾಡಿದೆ.

LEAVE A REPLY

Please enter your comment!
Please enter your name here