Home ಬೆಂಗಳೂರು ನಗರ DCM D K Shivakumar | ಜಾತಿ ಗಣತಿ ವರದಿ ಕುರಿತು ಸಿಎಂಗೆ ಪತ್ರ: ಡಿಸಿಎಂ...

DCM D K Shivakumar | ಜಾತಿ ಗಣತಿ ವರದಿ ಕುರಿತು ಸಿಎಂಗೆ ಪತ್ರ: ಡಿಸಿಎಂ ನಿರಾಕರಣೆ

71
0
DCM DK Shivakumar rejects writing letter to CM on caste census report
DCM DK Shivakumar rejects writing letter to CM on caste census report

ನವದೆಹಲಿ/ಬೆಂಗಳೂರು:

ಜಾತಿ ಗಣತಿ ವರದಿ ಅಂಗೀಕಾರ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ತಾವು ಪತ್ರ ಬರೆದಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿರುವುದನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.

ತಾವು ಸಿಎಂ ಅವರಿಗೆ ಯಾವುದೇ ಪತ್ರ ಬರೆದಿಲ್ಲ. ಈ ವಿಚಾರವಾಗಿ ಅವರ ಜತೆ ಚರ್ಚೆಯನ್ನೂ ನಡೆಸಿಲ್ಲ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೂ ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವುದು ಸತ್ಯಕ್ಕೆ ದೂರವಾದುದು ಹಾಗೂ ಕಪೋಲ ಕಲ್ಪಿತ. ತಮ್ಮ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ತಂದು ಹಾಕಲು, ಒಡಕು ಮೂಡಿಸಲು ಈ ಸುಳ್ಳು ಸುದ್ದಿಯನ್ನು ಸೃಷ್ಠಿಸಲಾಗಿದೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here