ಬೆಂಗಳೂರು, ಜ.08: Bengaluru South City Corporationಯ ಹಣಕಾಸು ಸ್ಥಿತಿ, ಅಭಿವೃದ್ಧಿ ಅಗತ್ಯಗಳು ಹಾಗೂ ಆಡಳಿತಾತ್ಮಕ ಸುಧಾರಣೆಗಳ ಕುರಿತು Fifth State Finance Commission ಅಧ್ಯಕ್ಷ Dr. C. Narayanaswamy ನೇತೃತ್ವದ ಆಯೋಗ ಇಂದು ಪರಿಶೀಲನೆ ನಡೆಸಿತು.
ಸಭೆಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷರು, ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು, ಘನ ಕಸ ನಿರ್ವಹಣೆ ಹಾಗೂ ವಾರ್ಡ್ ಮಟ್ಟದ ಮೇಲ್ವಿಚಾರಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ತಿಳಿಸಿದರು. 2011ರ ಜನಗಣತಿಯ ಪ್ರಕಾರ 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳು ಕೇಂದ್ರ ಸರ್ಕಾರದ “ಮಿಲಿಯನ್ ಪ್ಲಸ್” ಯೋಜನೆಯಡಿ ವಿಶೇಷ ಅನುದಾನಕ್ಕೆ ಅರ್ಹವಾಗಿವೆ ಎಂದ ಅವರು, ಸರಿಯಾದ ಹಾಗೂ ನಿಖರ ಮಾಹಿತಿಯನ್ನು ಸಲ್ಲಿಸಿದಲ್ಲಿ ಮುಂದಿನ ಹಣಕಾಸು ವರ್ಷಕ್ಕೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆಯ ಸ್ಥಿತಿಗತಿಯನ್ನು ವಿವರಿಸಿದ ಆಯುಕ್ತ K. N. Ramesh, ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 4.5 ಲಕ್ಷ ಕುಟುಂಬಗಳು ವಾಸವಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಕೊರತೆ ಗಂಭೀರವಾಗಿದೆ ಎಂದು ಆಯೋಗದ ಗಮನಕ್ಕೆ ತಂದರು. ಅಗತ್ಯ ಸೇವೆಗಳಿಗಾಗಿ ಹೆಚ್ಚುವರಿ ಮಾನವ ಸಂಪನ್ಮೂಲ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ಪ್ರಮುಖ ಬೇಡಿಕೆಗಳು ಮತ್ತು ಸವಾಲುಗಳು
- ಆರೋಗ್ಯ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಮಾತೃ ಮತ್ತು ಶಿಶು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ಬಲಪಡಿಸುವಿಕೆ
- ರಸ್ತೆ ಮತ್ತು ಮೂಲಸೌಕರ್ಯ: ಒಟ್ಟು 2,294 ಕಿ.ಮೀ ರಸ್ತೆಗಳಲ್ಲಿಈ 430 ಕಿ.ಮೀ ಇನ್ನೂ ಡಾಂಬರೀಕರಣವಾಗಿಲ್ಲ. ಪಂಚಾಯತ್ ವ್ಯಾಪ್ತಿಯಿಂದ ಸೇರಿಸಿರುವ ಪ್ರದೇಶಗಳಲ್ಲಿ ರಸ್ತೆ ಡಾಂಬರೀಕರಣ ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಅನುದಾನ ಅಗತ್ಯ
- ಪರಿಸರ ಮತ್ತು ಉದ್ಯಾನಗಳು: 303 ಉದ್ಯಾನಗಳ ಅಭಿವೃದ್ಧಿ, 59 ಕೆರೆಗಳ ಸಂರಕ್ಷಣೆ, ಬೇಲಿ ಮತ್ತು ಭದ್ರತೆ, ಹಾಗೂ ಕೆರೆಗಳ ನಡುವಿನ ಮಳೆನೀರು ಕಾಲುವೆಗಳ (SWD) ನಿರ್ವಹಣೆ
- ಘನ ಕಸ ನಿರ್ವಹಣೆ: ಆಟೋ ಟಿಪ್ಪರ್ಗಳು, ಕಾಂಪ್ಯಾಕ್ಟರ್ಗಳ ಖರೀದಿ, ‘ಕಸ ಕಿಯೋಸ್ಕ್’ ಘಟಕಗಳ ಸ್ಥಾಪನೆ ಮತ್ತು ಬಯೋ-ಮಿಥೇನ್ ಅನಿಲ ಘಟಕಗಳು

ಆಯುಕ್ತರು ವಿವಿಧ ತುರ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಒಟ್ಟು ₹1,675 ಕೋಟಿ ವಿಶೇಷ ಅನುದಾನವನ್ನು ಆಯೋಗದ ಮುಂದೆ ಮಂಡಿಸಿದರು. ಇದರಲ್ಲಿ ಸಿಬ್ಬಂದಿ ವೇತನ, ಕೆರೆ ಹಾಗೂ ತೋಟಗಾರಿಕೆ ಅಭಿವೃದ್ಧಿ, ಇಂದಿರಾ ಕ್ಯಾಂಟೀನ್ಗಳು, 100 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ವಿಪತ್ತು ನಿರ್ವಹಣಾ ಸಾಧನಗಳು, ಬೀದಿ ದೀಪಗಳ ನಿರ್ವಹಣೆ ಮತ್ತು ಹೊಸ ವಾರ್ಡ್ ಕಚೇರಿಗಳ ನಿರ್ಮಾಣ ಸೇರಿವೆ.
ಆಯೋಗದ ಸಲಹೆಗಳು
ಪಾಲಿಕೆ ತನ್ನ ಸ್ವಂತ ಆದಾಯ ಹೆಚ್ಚಿಸಿಕೊಳ್ಳಲು ಜಾಹೀರಾತು ಶುಲ್ಕ ಮತ್ತು ವ್ಯಾಪಾರ ಪರವಾನಗಿ ಶುಲ್ಕಗಳ ಬಲಪಡಿಸುವಿಕೆಗೆ ಒತ್ತು ನೀಡಬೇಕು ಎಂದು ಆಯೋಗ ಸಲಹೆ ನೀಡಿತು. ಜೊತೆಗೆ CSR ನಿಧಿಗಳ ಮೂಲಕ ಸೌರ ರೂಫ್ಟಾಪ್ ವ್ಯವಸ್ಥೆ ಅಳವಡಿಸಿ ಇಂಧನ ಸಂರಕ್ಷಣೆಗೆ ಉತ್ತೇಜನ ನೀಡುವಂತೆ ಸೂಚಿಸಿತು.

ಕ್ಷೇತ್ರ ಪರಿಶೀಲನೆ
ಆಯೋಗದ ಸದಸ್ಯರು ಕೊರಮಂಗಲ ವಾರ್ಡ್ ಕಚೇರಿ ಹಾಗೂ ‘ಕಸ ರಸ’ ಕೇಂದ್ರಕ್ಕೆ ಭೇಟಿ ನೀಡಿ, ಕಸ ವಿಂಗಡಣೆ ಮತ್ತು ಸಂಸ್ಕರಣಾ ಪ್ರಕ್ರಿಯೆಯನ್ನು ನೇರವಾಗಿ ಪರಿಶೀಲಿಸಿದರು. ವಾರ್ಡ್ ಮಟ್ಟದ ಸಣ್ಣ ನಾಗರಿಕ ಕಾಮಗಾರಿಗಳಿಗೆ ಗ್ಯಾಂಗ್ಮೆನ್ ಮತ್ತು ವರ್ಕ್ ಇನ್ಸ್ಪೆಕ್ಟರ್ಗಳ ನೇಮಕ ಅಗತ್ಯವಿದೆ ಎಂಬುದರ ಕುರಿತು ಎಂಜಿನಿಯರ್ಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತ Naveen Kumar Raju, ಸಂಯುಕ್ತ ಆಯುಕ್ತರು Satish Babu ಹಾಗೂ Madhu N. N., ರಾಜ್ಯ ಹಣಕಾಸು ಆಯೋಗದ ಸದಸ್ಯರು Mohammed Sana Ulla, R. S. Ponde, ಸಲಹೆಗಾರ್ತಿ Smitha S. Biradar, ನಗರ ಪಾಲಿಕೆಯ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
