Home ಬೆಳಗಾವಿ ಡಿಸಿಎಂ ಲಕ್ಷ್ಮಣ ಸವದಿ ಸಹೋದರನ ಪುತ್ರ ಕೋವಿಡ್ ನಿಂದ ಸಾವು

ಡಿಸಿಎಂ ಲಕ್ಷ್ಮಣ ಸವದಿ ಸಹೋದರನ ಪುತ್ರ ಕೋವಿಡ್ ನಿಂದ ಸಾವು

85
0

ಬೆಳಗಾವಿ/ಬೆಂಗಳೂರು:

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸಹೋದರ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಅವರ ಪುತ್ರ ವಿನೋದ ಸವದಿ (36) ಕೋವಿಡ್ ನಿಂದ ಬುಧವಾರ ನಿಧನರಾದರು.

ಕೆಲವು ದಿನಗಳ ಹಿಂದೆ ಕೋವಿಡ್ ದೃಢಪಟ್ಟಿದ್ದರಿಂದ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ವಿನೋದ ಸವದಿ ಅವರು ಬುಧವಾರದಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ವಿನೋದ್ ಅವರು ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ಉಚಿತವಾಗಿ ಹಂಚಿಕೆ ಮಾಡುವುದರಲ್ಲಿ ಮತ್ತು ಇತರ ಸಾಮಾಜಿಕ ಕೆಲಸಗಳಲ್ಲಿಯೂ ಅವಿರತವಾಗಿ ಕೆಲಸ ಮಾಡಿದ್ದರು.

ಭವಿಷ್ಯದಲ್ಲಿ ಉತ್ತಮ ನಾಯಕನಾಗುವ ಲಕ್ಷಣಗಳು ಅವರಲ್ಲಿ ಮೈಗೂಡಿದ್ದವು. ಆದರೆ ಕೇವಲ 36 ವರ್ಷಗಳಲ್ಲಿಯೇ ಅವರ ಬದುಕು ಅಂತ್ಯಗೊಂಡಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ವಿನೋದ ಅವರ ಆತ್ಮೀಯ ಸ್ನೇಹಿತರ ಬಳಗವು ಕಂಬನಿ ಮಿಡಿದಿದೆ.

LEAVE A REPLY

Please enter your comment!
Please enter your name here