Home ಕರ್ನಾಟಕ Lake Buffer Bengaluru | ಕೆರೆಯ ಅಂಚಿನಿಂದ 300 ಮೀಟರ್ ಕೆರೆ ಬಫರ್ ಕಾಯ್ದಿರಿಸಿದ ನಂತರವೇ...

Lake Buffer Bengaluru | ಕೆರೆಯ ಅಂಚಿನಿಂದ 300 ಮೀಟರ್ ಕೆರೆ ಬಫರ್ ಕಾಯ್ದಿರಿಸಿದ ನಂತರವೇ ನಿವೇಶನಗಳ ಅಭಿವೃದ್ಧಿ ಕಾರ್ಯ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

31
0

ಬೆಂಗಳೂರು, ಮಾರ್ಚ್ 20, (ಕರ್ನಾಟಕ ವಾರ್ತೆ): ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುತ್ತಿರುವ ಬಡಾವಣೆಗಳಲ್ಲಿ ಖಒP-2015 ರಂತೆ ಕೆರೆಗೆ ಬಫರ್ ಅಳವಡಿಸಿಕೊಳ್ಳುತ್ತಿದ್ದು, ಕೆರೆಯ ಅಂಚಿನಿಂದ 300 ಮೀ ಕೆರೆ ಬಫರ್ ಕಾಯ್ದಿರಿಸಿದ ನಂತರವೇ ನಿವೇಶನಗಳ ರಚನೆ / ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿರುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಟಿ.ಎ. ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನಗೆ ಉತ್ತರಿಸಿದ ಉಪ ಮುಖ್ಯ ಮಂತ್ರಿಗಳು, ದಶಕಗಳ ಬೆಂಗಳೂರು ಹಿಂದೆ ನಗರದಲ್ಲಿ ಸಿಟಿ ಇಂಪ್ರೂವ್‍ಮೆಂಟ್ ಟ್ರಸ್ಟ್ ಬೋರ್ಡ್ ವತಿಯಿಂದ ಕೆಲವೊಂದು ನಿರ್ಜೀವ ಕೆರೆಗಳನ್ನು ಬಳಸಿಕೊಂಡು ಬಡಾವಣೆಯನ್ನು ನಿರ್ಮಿಸಲಾಗಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ PWD 82 IMB 1985, Bangalore dated:26.07.1985 ರಲ್ಲಿ ಪರಿಶೀಲಿಸಲು ಲಕ್ಷ್ಮಣ್ ರಾವ್ ಸಮಿತಿಯನ್ನು ರಚಿಸಲಾಗಿದ್ದು, ಸದರಿ ಸಮಿತಿಯು ಪರಿಶೀಲಿಸಿ ನಿರ್ಜೀವ ಕೆರೆಗಳನ್ನು ಗುರುತಿಸಿ, ಸದರಿ ಕೆರೆಗಳಲ್ಲಿ ರಚಿಸಿರುವ ಬಡಾವಣೆಗಳು ನಿರ್ಜೀವ ಕೆರೆಗಳಲ್ಲಿ ರಚಿಸಿರುವುದಾಗಿ ವರದಿ ನೀಡಿರುತ್ತಾರೆ. ಸದರಿ ವರದಿಯ ಆಧಾರದ ಮೇಲೆ ನಿರ್ಜೀವ ಕೆರೆಗಳಲ್ಲಿ ರಚಿಸಿರುವ ಬಡಾವಣೆಗಳನ್ನು ಅನುಮೋದಿಸಲಾಗಿರುತ್ತದೆ ಅಭಿವೃದ್ಧಿಗೊಳಿಸಲಾಗಿರುತ್ತದೆ. 1985 ನೇ ಸಾಲಿನಲ್ಲಿ ಹಾಗೂ ಪ್ರಸ್ತುತ ಯಾವುದೇ ಕೆರೆಗಳಲ್ಲಿ ಬಡಾವಣೆಗಳನ್ನು ರಚಿಸಲಾಗುತ್ತಿಲ್ಲ.

ಕಂದಾಯ ದಾಖಲಾತಿಗಳಲ್ಲಿ ಕೆರೆ ಎಂದು ನಮೂದಾಗಿ ಪ್ರಸ್ತುತ ಆ ಕೆರೆಯು ಸ್ಥಳದಲ್ಲಿ ಅಭಿವೃದ್ಧಿ ಹೊಂದಿದ್ದರೂ ಸಹ ಅಂದರೆ, ಕೆರೆಯು ಕೆರೆಯ ಮೂಲ ಸ್ವರೂಪವನ್ನು ಕಳೆದುಕೊಂಡಿದ್ದರೂ ಸಹ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 2014 ರ ಕಲಂ 12(3) ರನ್ನಯ ಕೆರೆ ಎಂದು ಪರಿಗಣಿಸಬೇಕಾಗಿದ್ದು, ಕೆರೆ ಎಂದು ಪರಿಗಣಿಸಿದ ನಂತರ ಅನುಮೋದಿತ ಮಹಾಯೋಜನ ಖಒP-2015 ರ ವಲಯ ನಿಯಮಾವಳಿಗಳಂತೆ ಕೆರೆಯ ಅಂಚಿನಿಂದ 300 ಮೀ ಬಫರ್ ಕಾಯ್ದಿರಿಸಬೇಕಾಗಿರುತ್ತದೆ.

ದಿನಾಂಕ: 25.06.2007 ರಂದು ಅನುಮೋದನೆಗೊಂಡ ಮಹಾಯೋಜನೆ RMP-2015 ಕ್ಕಿಂತ ಮುಂಚಿತವಾಗಿ ಪ್ರಾಧಿಕಾರದಿಂದ ಅನುಮೋದನೆಯಾಗಿರುವ / ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿನ ನಿವೇಶನಗಳಿಗೆ, ಬಫರ್ ಅನ್ವಯವಾಗುವುದಿಲ್ಲ ಎಂದು ಮಾನ್ಯ ಉಚ್ಚ ನ್ಯಾಯಾಲಯವು WP No. 15298/2020 ರಲ್ಲಿ ದಿನಾಂಕ: 06.04.2020 ರಂದು ತೀರ್ಪುನೀಡಿದ್ದು, ಅದರಂತೆ ಕ್ರಮವಹಿಸಲಾಗುತ್ತಿದೆ.

ದಿನಾಂಕ 25.06.2007 ರ ನಂತರ ಜಾರಿಗೊಂಡ RMP-2015 ರಂತೆ ಪ್ರಾಧಿಕಾರದಿಂದ ಅನುಮೋದಿಸುತ್ತಿರುವ / ಅಭಿವೃದ್ಧಿಪಡಿಸುತ್ತಿರುವ ಬಡಾವಣೆಗಳಲ್ಲಿ ಖಒP-2015 ರಂತೆ ಕೆರೆಗೆ ಬಫರ್ ಅಳವಡಿಸಿಕೊಳ್ಳುತ್ತಿದ್ದು, ಕೆರೆಯ ಅಂಚಿನಿಂದ 300 ಮೀ ಕೆರೆ ಬಫರ್ ಕಾಯ್ದಿರಿಸಿದ ನಂತರವೇ ನಿವೇಶನಗಳ ರಚನೆ / ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿರುತ್ತದೆ.

ಬೆಂಗಳೂರು ಪ್ರಾಧಿಕಾರವು ಅಭಿವೃದ್ಧಿ ಕೆರೆಗೆ ಹೊಂದಿಕೊಂಡಂತೆ ಇರುವ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 2014 ರ ಕಲಂ 12(3) ರ ಅನುಸಾರ ಹಾಗೂ ಅನುಮೋದಿತ ಮಹಾಯೋಜನೆ RMP-2015 ರ ವಲಯ ನಿಯಮಾವಳಿಗಳಂತೆ ಮತ್ತು ಕಂದಾಯ ಇಲಾಖೆಯ ಗ್ರಾಮನಕ್ಷೆಯಲ್ಲಿ ಕೆರೆ ಎಂದು ಚಿಹ್ನೆ ಇದ್ದಲ್ಲಿ, ಅದರಂತೆ ಕೆರೆಯ ಅಂಚಿನಿಂದ 300 ಮೀ. ಬಫರ್ ಕಾಯ್ದಿರಿಸಲಾಗುತ್ತಿದೆ ಹಾಗೂ ನಾಲೆಗೆ ಹೊಂದಿಕೊಂಡಂತೆ ಇರುವ ಜಮೀನುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ RMP-2015 Clause 4.12.2 Note ಅನುಸಾರ ನಾಲಾ ಬಫರ್ ಕಾಯ್ದಿರಿಸಲಾಗಿರುತ್ತದೆ.

ಬೆಂಗಳೂರು ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಪರಿಷ್ಕøತ ವ್ಯಾಪಕಾಭಿವೃದ್ಧಿ ಯೋಜನೆ-1995 ದಿನಾಂಕ 05.01.1995 ರಂದು ಅನುಮೋದನೆಯಾಗಿರುತ್ತದೆ. ತದನಂತರ ದಿನಾಂಕ 25.06.2007 ರಲ್ಲಿ ಪರಿಷ್ಕøತ ಮಹಾಯೋಜನೆ-2015 (RMP-2015) ಅನುಮೋದನೆಯಾಗಿರುತ್ತದೆ. ಪ್ರಸ್ತುತ ದಿನಾಂಕ 25.06.2007 ರಂದು ಅನುಮೋದನೆಯಾಗಿರುವ ಪರಿಷ್ಕøತ ಮಹಾಯೋಜನೆ -2015 ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here