Home ರಾಜಕೀಯ ನಿಖಿಲ್ ಕುಮಾರಸ್ವಾಮಿ ಮೇಲೆ ಕೇಸ್ ಹಾಕಲು ಡಿಜಿಪಿ ಕಚೇರಿಯಲ್ಲಿ ರಾತ್ರಿ 11 ಗಂಟೆವರೆಗೂ ಚರ್ಚೆ; ಪೇದೆ...

ನಿಖಿಲ್ ಕುಮಾರಸ್ವಾಮಿ ಮೇಲೆ ಕೇಸ್ ಹಾಕಲು ಡಿಜಿಪಿ ಕಚೇರಿಯಲ್ಲಿ ರಾತ್ರಿ 11 ಗಂಟೆವರೆಗೂ ಚರ್ಚೆ; ಪೇದೆ ಮಟ್ಟಕ್ಕೆ ಇಳಿದ ಡಿಜಿಪಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

83
0

ಬೆಂಗಳೂರು: ಮೊನ್ನೆ ರಾಮನಗರದಲ್ಲಿ ನಡೆದ ಪ್ರತಿಭಟನೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಡಿಜಿಪಿ ಕಚೇರಿಯಲ್ಲಿ ರಾತ್ರಿ 11 ಗಂಟೆವರೆಗೂ ಚರ್ಚೆ ಮಾಡಿದ್ದಾರೆ. ಹೆಚ್.ಡಿ. ದೇವೆಗೌಡರ ಕುಟುಂಬದಲ್ಲಿ ಎಲ್ಲರನ್ನು ಮುಗಿಸಿದ್ದಿವಿ.‌ ನಿಖಿಲ್ ಒಬ್ಬ ಉಳಿದಿದ್ದಾನೆ. ಅವನನ್ನೂ ಎ1 ಆರೋಪಿ ಮಾಡುಲು ಹೊರಟ್ಟಿದಿರಾ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಪಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು ಸಚಿವರು ಹೇಳಿದ್ರು ಅಂತ ಡಿಜಿಪಿ ಏನು ಮಾಡಲು ಹೊರಟಿದ್ದೀರಿ? ನಮ್ಮ ರಾಜ್ಯದ ಡಿಜಿಪಿ ಒಬ್ಬ ಕಾನ್ಸ್ ಟೇಬಲ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಒಂದುವರೆ ವರ್ಷದಿಂದ ಮಾಡಿರುವ ಕೆಲಸ ಬಿಡಿ. ಇನ್ನು ಮುಂದಾದರೂ ಜನರ ಪರವಾಗಿ ಕೆಲಸ ಮಾಡಿ. ಹಿಂದುಳಿದ ವರ್ಗಗಳು ಮೆಚ್ಚುವ ಕೆಲಸ ಮಾಡಿ. ನಿಮ್ಮ ಆರ್ಥಿಕ ಸಲಹೆಗಾರರು ಏನು ಹೇಳಿದ್ದಾರೆ. ಅಭಿವೃದ್ಧಿಗೆ ಹಣವಿಲ್ಲ ಅಂತ ಹೇಳಿದ್ದಾರೆ. ನಾನು ಆರ್ಥಿಕ ಸಲಹೆಗಾರನಾಗಿದ್ದಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಹಣ ತಂದಿದ್ದೀನಿ ಎಂದಿದ್ದಾರೆ. ಇನ್ನುಳಿದ ಶಾಸಕರು ಏನು ಮಾಡಬೇಕು. ಇದು ನಾವು ಹೇಳಿಲ್ಲ, ನಿಮ್ಮ ಆರ್ಥಿಕ ಸಲಹೆಗಾರರೇ ಹೇಳಿದ್ದಾರೆ ಎಂದು ಅವರು ಟೀಕಿಸಿದರು.

ಈಗ ಒಂದು ಇಲಾಖೆ ಮಾತ್ರ ಕಾಣಿಸ್ತಾ ಇದೆ.‌ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದಕ್ಕೆ ಹೊರಗೆ ಬಂದಿದೆ. ಸಿಎಜಿ ವರದಿ ಇಟ್ಟುಕೊಂಡು ಏನು ಮಾಡೋಕೆ ಆಗುತ್ತದೆ. ಈ ರೀತಿಯ ಪ್ರಕರಣದಲ್ಲಿ ಡಿಜಿಪಿಯವರು ಆ ಕಚೇರಿಯನ್ನು ಪೇದೆ ಕಚೇರಿ ಮಾಡಿದ್ದಾರೆ. ಡಿಜಿಪಿ ಕೆಲಸ ಮಾಡ್ತಾ ಇದ್ದೀರಾ ಅಥವಾ ಪೇದೆ ಕೆಲಸ ಮಾಡ್ತಾ ಇದ್ದೀರಾ ಎಂದು ಡಿಜಿಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಡಿಯವರು ಯಾಕೆ ಬಂದಿದ್ದಾರೆ. ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಅವರಿಗೆ ತನಿಖೆ ಮಾಡೋಕೆ ಅಧಿಕಾರ ಇದೆ ಅದಕ್ಕೆ ಬಂದಿದ್ದಾರೆ ಎಂದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಟಿ.ಎ.ಶರವಣ, ಶಾಸಕ ಶರನುಗೌಡ ಕಂದಕೂರ, ಪಕ್ಷದ ಹಿರಿಯ ಮುಖಂಡರಾದ ಪ್ರಕಾಶ್, ರವೀಶ್ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here