Home ಕರ್ನಾಟಕ Bengaluru | ಕುದುರೆಯಲ್ಲಿ ಗ್ಲಾಂಡರ್ಸ್ ರೋಗೋದ್ರೇಕ ಪತ್ತೆ : ಡಿ.ಜೆ.ಹಳ್ಳಿ ಸುತ್ತಮುತ್ತ ರೋಗಪೀಡಿತ ವಲಯ ಘೋಷಣೆ

Bengaluru | ಕುದುರೆಯಲ್ಲಿ ಗ್ಲಾಂಡರ್ಸ್ ರೋಗೋದ್ರೇಕ ಪತ್ತೆ : ಡಿ.ಜೆ.ಹಳ್ಳಿ ಸುತ್ತಮುತ್ತ ರೋಗಪೀಡಿತ ವಲಯ ಘೋಷಣೆ

40
0

ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕಿನ ಡಿ.ಜೆ.ಹಳ್ಳಿಯ ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗೋದ್ರೇಕ ದೃಢಪಟ್ಟಿರುವುದರಿಂದ ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ ಸುತ್ತಲಿನ 5 ಕಿ.ಮೀ.ವ್ಯಾಪ್ತಿ ಪ್ರದೇಶವನ್ನು ರೋಗಪೀಡಿತ ವಲಯ ಹಾಗೂ 5 ರಿಂದ 25 ಕಿ.ಮೀ.ಪ್ರದೇಶವನ್ನು ಜಾಗೃತ ವಲಯ ಎಂದು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಘೋಷಿಸಿದೆ.

ಅಧಿಸೂಚಿತ ಪ್ರದೇಶದ ಒಳಗೆ ಮತ್ತು ಹೊರಗೆ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನ ವಲನವನ್ನು ನಿರ್ಬಂಧಿಸಲಾಗಿದೆ.

“ಪ್ರಾಣಿಗಳಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿನಿಯಮ 2009″ ರ ಕಲಂ-6 ಹಾಗೂ ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಹೊರಡಿಸಿರುವ ಗ್ಲಾಂಡರ್ಸ್ ನಿಯಂತ್ರಣ ಹಾಗೂ ನಿರ್ಮೂಲನೆ ರಾಷ್ಟ್ರೀಯ ಕ್ರಿಯಾ ಯೋಜನೆ-2019 ರ ಅಧ್ಯಾಯ 4.1 (National Action Plan for Control and Eradication of Glanders in India-2019 ) ರ ಪ್ರಕಾರ ರೋಗೋದ್ರೇಕ ಕಾಣಿಸಿಕೊಂಡ ಕುದುರೆ ಮಾಲೀಕರಾದ ಖಲೀದ್ ಷರೀಫ್ ಬಿನ್ ಎ.ಜೆ ಷರೀಫ್ ಅವರ ಸಾಮಾನ್ಯ ವಾಸಸ್ಥಳವಾದ ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆಯ ನಂ.72, ಮೋದಿ ರಸ್ತೆ, ಡಿ.ಜೆ.ಹಳ್ಳಿ ಕೇಂದ್ರವಾಗಿದ್ದು, ಅದರ ವ್ಯಾಪ್ತಿಯಿಂದ ಸುತ್ತಲಿನ (ರೇಡಿಯಸ್)5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು “ರೋಗ ಪೀಡಿತ ವಲಯ” ಎಂದು ಹಾಗೂ 5 ರಿಂದ 25 ಕಿ.ಮೀ ಗಳ ವ್ಯಾಪ್ತಿಯ (ರೇಡಿಯಸ್/ ತ್ರಿಜ್ಯ) ಪ್ರದೇಶವನ್ನು “ಜಾಗೃತ ವಲಯ” ಎಂದು ಪಶುಸಂಗೋಪನಾ ಹಾಗೂ ಹೈನುಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here