ಬೆಂಗಳೂರು:
ಇಂದಿನಿಂದ ದೊಡ್ಡಬಳ್ಳಾಪುರ ಬೈಪಾಸ್ ನಿಂದ ಹೊಸಕೋಟೆ ವರೆಗೂ ನಾಲ್ಕಪಥದ ರಸ್ತೆಗೆ ಟೋಲ್ ಸುಂಕ ವಿಧಿಸಲಾಗುತ್ತಿದೆ.
ದೊಡ್ಡಬಳ್ಳಾಪುರದಿಂದ ಹೊಸಕೋಟೆ ವರೆಗೂ ಈಗಾಗಲೇ ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣವಾಗಿದೆ. ಸುಮಾರು 43.ಕಿ.ಮೀ. ಹೆದ್ದಾರಿ ರಸ್ತೆ ವಾಹನ ಸವಾರರ ಬಳಕೆಗೆ ಮುಕ್ತವಾಗಲಿದೆ.
ಡಾಬಸ್ ಪೆಟೆಯಿಂದ ಹೊಸಕೋಟೆವರೆಗೂ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೆ ದೊಡ್ಡಬಳ್ಳಾಪುರ ಬೈಪಾಸ್ ನಿಂದ ಹೊಸಕೋಟೆ ವರೆಗೂ ರಸ್ತೆ ಕಾಮಗಾರಿ ಮುಕ್ತಾಯ ಆಗಿದೆ. ಡಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಇದೀಗ ನಲ್ಲೂರು ಟೋಲ್ ಆರಂಭಕ್ಕೆ ಹೆದ್ದಾರಿ ಪ್ರಾಧಿಕಾರದಿಂದ ಮುಹೂರ್ತ ಫಿಕ್ಸ್ ಆಗಿದೆ.
ಪ್ರಮುಖವಾಗಿ ಈ ಮಾರ್ಗವು ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹೊಸೂರನ್ನು ತಲುಪಲಿದೆ. ದೊಡ್ಡಬಳ್ಳಾಪುರ ಬೈಪಾಸ್‌ನಿಂದ ನಲ್ಲೂರು ಗ್ರಾಮದವರೆಗಿನ ರಸ್ತೆ ಪೂರ್ಣ ಆಗಿದ್ದು, 34.15 ಕಿ.ಮೀ. ಪ್ರಯಾಣಕ್ಕೆ ವಾಹನ ಸವಾರರು ಶುಲ್ಕ ಪಾವತಿ ಮಾಡಬೇಕಿದೆ.
ಯಾವ್ಯಾವ ವಾಹನಗಳಿಗೆ ಎಷ್ಟು ಶುಲ್ಕ?
- ಕಾರು, ಜೀಪು, ವ್ಯಾನು, ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 70 ರೂಪಾಯಿ ಹಾಗೂ ಅದೇ ದಿನ ವಾಪಾಸ್ ಬಂದರೆ 105 ರೂಪಾಯಿ ಪಾವತಿಸಬೇಕು.
- ಇದೇ ಒಂದೇ ತಿಂಗಳಲ್ಲಿ 50 ಸಂಚರಿಸುವ ಮಾಸಿಕ ಪಾಸ್‌ಗೆ 2375 ರೂಪಾಯಿ ನಿಗದಿಪಡಿಸಲಾಗಿದೆ. ಜಿಲ್ಲೆಯ ಒಳಗೆ ನೋಂದಣಿಯಾಗಿರುವ ವಾಣಿಜ್ಯ ವಾನಹಗಳಿಗಾಗಿ 35 ರೂಪಾಯಿ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ.
- ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 115 ರೂಪಾಯಿ ಹಾಗೂ ಅದೇ ದಿನ ಮರಳಿ ಬಂದರೆ 175 ರೂಪಾಯಿ ಹಾಗೂ ಮಾಸಿಕ ಪಾಸ್ ರೂಪದಲ್ಲಿ3835 ರೂಪಾಯಿ ಪಾವತಿಸಬೇಕು. ಜಿಲ್ಲೆಯೊಳಗೆ ನೋಂದಣಿಯಾಗಿರುವ ವಾಣಿಜ್ಯ ವಾನಹಗಳಿಗಾಗಿ 60 ರೂಪಾಯಿ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ.
- ಬಸ್ ಅಥವಾ ಟ್ರಕ್‌ಗಳಿಗೆ ಏಕ ಮುಖ ಸಂಚಾರಕ್ಕೆ 240 ರೂಪಾಯಿ, ಅದೇ ದಿನ ಮರಳಿ ಬಂದರೆ 360 ರೂಪಾಯಿ ಪಾವತಿಸಬೇಕು. ಮಾಸಿಕ 8,040 ರೂಪಾಯಿ ಪಾವತಿಸಬೇಕಾಗುತ್ತದೆ. ಜಿಲ್ಲೆಯೊಳಗೆ ನೋಂದಣಿ ಮಾಡಿಸಿಕೊಂಡಿರುವ ವಾಣಿಜ್ಯ ವಾಹನಗಳಿಗೆ 120 ರೂಪಾಯಿ ನಿಗದಿ ಮಾಡಲಾಗಿದೆ.
- ಮೂರು ಆಕ್ಸೆಲ್ ವಾಣಿಜ್ಯ ವಾಹನ ಏಕಮುಖ ಸಂಚಾರಕ್ಕೆ 265 ರೂಪಾಯಿ, ಅದೇ ದಿನ ಮರಳಿ ಬಂದರೆ 360 ರೂಪಾಯಿ ಪಾವತಿಸಬೇಕು. ಮಾಸಿಕ ಪಾವತಿಗೆ 8770 ರೂಪಾಯಿ, ಜಿಲ್ಲೆಯೊಳಗೆ ನೋಂದಣಿಯಾಗಿರುವ ವಾಣಿಜ್ಯ ವಾಹನಗಳ 130 ರೂಪಾಯಿ ಶುಲ್ಕ ನಿಗದಿ ಮಾಡಿದೆ.
- ಇನ್ನು ಭಾರೀ ವಾಹನಗಳಿಗೆ ಒಂದು ಬಾರಿ ಸಂಚಾರಕ್ಕೆ 380 ರೂಪಾಯಿ, ಅದೇ ದಿನ ಹಿಂತಿರುಗಿ ಬಂದರೆ 565 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕು. ಮಾಸಿಕ 12605 ರೂಪಾಯಿ ಪಾವತಿ ಮಾಡಬೇಕು. ಮತ್ತು ಜಿಲ್ಲೆಯೊಳಗೆ ನೋಂದಣಿಯಾದ ವಾಹನಗಳಿಗೆ 130 ರೂಪಾಯಿ ನಿಗದಿ ಮಾಡಿದೆ.