Home ಬೆಳಗಾವಿ Dog Bite: 8 ಜನರ ಮೇಲೆ ಬೀದಿ ನಾಯಿ ದಾಳಿ

Dog Bite: 8 ಜನರ ಮೇಲೆ ಬೀದಿ ನಾಯಿ ದಾಳಿ

45
0
Dog catch at Belgaum Representational Image

ಬೆಳಗಾವಿ:

ಬೆಳಗಾವಿಯಲ್ಲಿ 8 ಜನರ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿದೆ.

ದ್ವಾರಕಾ ನಗರದ ಮಂಡೋಲಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಬೀದಿ ನಾಯಿಯೊಂದು ಏಕಾಏಕಿ ಹಿಂಸಾಚಾರಕ್ಕೆ ತಿರುಗಿ ಎಂಟಕ್ಕೂ ಹೆಚ್ಚು ಜನರಿಗೆ ಕಚ್ಚಿದೆ. ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆ ಅಧಿಕಾರಿಗಳ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

ನಾಯಿ ದಾಳಿ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬೀದಿ ನಾಯಿಯನ್ನು ಹಿಡಿಯಲು ಮಹಾನಗರ ಪಾಲಿಕೆ ನಿಯೋಜಿಸಿದ್ದ ತಜ್ಞರ ತಂಡ ಅದೇ ಸಂಜೆ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲಾ ಗಾಯಾಳುಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here