ಕಲಬುರಗಿ:
ಮಕ್ಕಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಬಾಂಧ್ಯವವನ್ನು ಹೊಂದಿದ್ದು, ಅದನ್ನು ಹಲವು ಬಾರಿ ತೋರ್ಪಡಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಿನ್ನೆಯಷ್ಟೇ ಪ್ರಧಾನಿ ಮೋದಿಯವರು ಕಲಬುರಗಿಗೆ ಭೇಟಿ ನೀಡಿ ಮತಬೇಟೆ ನಡೆಸಿದರು.
ಭೇಟಿ ವೇಳೆ ತಮ್ಮನ್ನು ನೋಡಲು ಬಂದಿದ್ದ ಪುಟಾಣೆ ಮಕ್ಕಳೊಂದಿಗೆ ಅಕ್ಕರೆಯ ಮಾತುಗಳನ್ನಾಗಿಡ ಪ್ರಸಂಗ ನಡೆಯಿತು.
ಭದ್ರತೆಯನ್ನು ಲೆಕ್ಕಿಸದೆ ಮಕ್ಕಳ ಬಳಿಗೆ ತೆರಳಿದ ಮೋದಿಯವರು, ಅವರೊಂದಿಗೆ ಕೂಡ ತಾವೂ ಕೂಡ ಮಗುವಾದರು. ಮಕ್ಕಳೊಂದಿಗೆ ಮಾತನಾಡುತ್ತಾ ಅವರಿಗೆ ಹಸ್ತ ಯೋಗ ಮಾಡುವುದನ್ನು ಹೇಳಿಕೊಟ್ಟರು. ಯಾವ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದೀರಿ? ನೀವು ದೊಡ್ಡವರಾದ ಮೇಲೆ ಏನಾಗಲು ಬಯಸುತ್ತೀರಿ ಎಂದು ಒಬ್ಬೊಬ್ಬರನ್ನೇ ಕೇಳಿದರು. ಈ ವೇಳೆ ಮಕ್ಕಳು ಪೊಲೀಸ್, ಡಾಕ್ಟರ್ ಆಗುತ್ತೇನೆ ಎಂದು ಹೇಳಿದರು.
प्रधानमंत्री @NarendraModi जी ने बच्चों के साथ जिया बचपन। pic.twitter.com/zJ1CeRHE0g
— Piyush Goyal (@PiyushGoyal) May 2, 2023
ಇದೇ ವೇಳೆ, ಓರ್ವ ಬಾಲಕ ತಾನು ನಿಮ್ಮ ಕಾರ್ಯದರ್ಶಿಯಾಗುತ್ತೇನೆ ಎಂದು ಹೇಳಿದ್ದು, ಈ ಮಾತಿಗೆ ಫಿದಾ ಆದ ಮೋದಿಯವರು, ಆತನಿಗೆ ಮತ್ತೊಂದು ಪ್ರಶ್ನೆ ಕೇಳಿದರು.
ಹೌದಾ, ಯಾಕಪ್ಪ ಪ್ರಧಾನಿ ಆಗುವುದಿಲ್ಲವೇ? ನೀವ್ಯಾರೂ ಪ್ರಧಾನಿ ಆಗಲು ಬಯಸುವುದಿಲ್ಲವೇ ಎಂದು ಎಲ್ಲಾ ಮಕ್ಕಳನ್ನು ಪ್ರಶ್ನಿಸಿದರು.
ಮೋದಿಯವರ ಈ ಮಾತಿಗೆ ಮಕ್ಕಳೆಲ್ಲರೂ ನಕ್ಕರು. ಈ ವೇಳೆ ಬಾಲಕನಿಗೆ ನೀನು ಪ್ರಧಾನಿಯಾಗು ಎಂದು ಹರಸಿದರು.