ಬೈರುತ್: ಇರಾನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ತನ್ನ ವೈಮಾನಿಕ ದಾಳಿ ಮುಂದುವರೆಸಿದ್ದು, ಇತ್ತ ಲೆಬೆನಾನ್ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ರಷ್ಯಾ ಮೂಲದ ಪತ್ರಕರ್ತ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಷ್ಯಾದ ಚಾನೆಲ್ RTಯ ಇಂಗ್ಲಿಷ್ ಭಾಷಾ ವರದಿಗಾರನೊಬ್ಬ ದಕ್ಷಿಣ ಲೆಬನಾನ್ನಿಂದ ವರದಿ ಮಾಡುತ್ತಿದ್ದಾಗ, ಇಸ್ರೇಲಿ ವಾಯು ದಾಳಿ ನಡೆದಿದೆ.
ಈ ವೇಳೆ ವರದಿಗಾರನಿಂದ ಕೆಲವೇ ಮೀಟರ್ ದೂರದಲ್ಲಿ ಬಿದ್ದಿದ್ದು, ಕೂಡಲೇ ವರದಿಗಾರ ಪಕ್ಕಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಇದು ಯುದ್ದ ಭೂಮಿಯ ವರದಿಗಾರಿಕೆಯ ಅಪಾಯವನ್ನು ತೋರಿಸುತ್ತಿದೆ.
ದಾಳಿಗೆ ಕೆಲವೇ ಸೆಕೆಂಡುಗಳ ಮೊದಲು, ಜೋರಾಗಿ ಝೇಂಕರಿಸುವ ಶಬ್ದ ಕೇಳಿ ವರದಿಗಾರ ಪಕ್ಕಕ್ಕೆ ಓಡುತ್ತಾರೆ. ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ಕ್ಷಿಪಣಿ ಬಂದು ಅಪ್ಪಳಿಸುತ್ತದೆ.
ಸ್ಫೋಟದ ರಭಸಕ್ಕೆ ನೆಲ ನಡುಗಿದ್ದು ಈ ವೇಳೆ ಕ್ಯಾಮೆರಾ ನೆಲಕ್ಕೆ ಉರುಳುತ್ತದೆ. ಈ ದಾಳಿಯಲ್ಲಿ ಲೆಬನಾನ್ RT ಬ್ಯೂರೋ ಮುಖ್ಯಸ್ಥ ಸ್ಟೀವ್ ಸ್ವೀನಿ ಮತ್ತು ಕ್ಯಾಮೆರಾ ಆಪರೇಟರ್ ಗಾಯಗೊಂಡಿದ್ದಾರೆ ಎಂದು RT ಹೇಳಿಕೆ ನೀಡಿದೆ.
“ಗೈಸ್, ನಾವು ಚೆನ್ನಾಗಿದ್ದೇವೆ. ಕ್ಷಿಪಣಿ ನಿಮ್ಮ ಮೇಲೆ ಹಾರುವಾಗ ನೀವು ಅದನ್ನು ಕೇಳಬಹುದು” ಎಂದು ಕ್ಯಾಮೆರಾಮನ್ ಅಲಿ ರಿಡಾ ಹೇಳಿದ್ದಾರೆ.
Dramatic footage. The moment Israeli missile hit right behind a Russia Today reporter while reporting live in Lebanon. Glad the reporter is safe and unharmed.
— Aditya Raj Kaul (@AdityaRajKaul) March 19, 2026
ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ದಾಳಿ
ಇದಕ್ಕೂ ಮೊದಲು, ಇರಾನ್ ಮೇಲಿನ ದಾಳಿ ವೇಳೆ ಹೆಜ್ಬೋಲ್ಲಾ ಉಗ್ರ ಸಂಘಟನೆ ಇರಾನ್ ಪರವಾಗಿ ದಾಳಿ ಮಾಡುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಲೆಬೆನಾನ್ ನ ಹೆಜ್ಬೋಲ್ಲಾ ಅಡಗುತಾಣಗಳ ಮೇಲೆ ಇಸ್ರೇಲ್ ದಾಳಿ ಆರಂಭಿಸಿದೆ.
ಲಿಟಾನಿ ನದಿಯ ಮೇಲಿನ ಸೇತುವೆಗಳನ್ನು ಹೊಡೆದುರುಳಿಸುವ ನಿರೀಕ್ಷೆಯಿದೆ ಎಂದು IDF ಎಚ್ಚರಿಸಿತ್ತು.
