Home ಬೆಂಗಳೂರು ನಗರ Drought in Karnataka | ಕರ್ನಾಟಕ ಸರ್ಕಾರ ಇನ್ನೂ 43 ತಾಲ್ಲೂಕುಗಳನ್ನು ಬರ ಪೀಡಿತ ಎಂದು...

Drought in Karnataka | ಕರ್ನಾಟಕ ಸರ್ಕಾರ ಇನ್ನೂ 43 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ

38
0
Drought in Karnataka | Center's drought study in the state from October 5
Drought in Karnataka

ಬೆಂಗಳೂರು:

ಮೊದಲ ಹಂತದಲ್ಲಿ ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಿಸುತ್ತಿರುವ 195 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಸೋಮವಾರ ಮತ್ತೆ 43 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.

21 ಅತ್ಯಂತ ಬರಪೀಡಿತ ಮತ್ತು 22 ಸಾಧಾರಣ ಬರಪೀಡಿತ ಸೇರಿ ಹೆಚ್ಚುವರಿ 43 ತಾಲ್ಲೂಕುಗಳ ಬರ ಪೀಡಿತ ಎಂದು ಘೋಷಿಸಿ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಅವರು ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ, ಯಳಂದೂರು, ಕೆ.ಆರ್.ನಗರ, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾಂ, ಕಲಘಟಗಿ, ಅಳ್ನಾವರ,ಅಣ್ಣಿಗೇರಿ, ಆಲೂರು, ಅರಸಿಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ, ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ, ಮಾಲೂರು, ತುಮಕೂರು, ಗುಂಡ್ಲುಪೇಟೆ, ಹನೂರು, ಕೊಳ್ಳೆಗಾಲ, ದೇವದುರ್ಗ, ಮಸ್ಕಿ, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ,ಮಂಗಳೂರು, ಮೂಡಬಿದಿರೆ, ಬ್ರಹ್ಮಾವರ, ಕಾರವಾರ.

LEAVE A REPLY

Please enter your comment!
Please enter your name here