ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಮಹಿಳಾ ಖೈದಿಗಳಿಂದ ಡ್ರಗ್ಸ್ ಸೇವನೆಯ ಪ್ರಮಾಣವು ಹೆಚ್ಚಾಗಿರುವುದಾಗಿ ವರದಿಯಾಗಿದೆ. ಜೈಲುಗಳಲ್ಲಿ ಡ್ರಗ್ಸ್ ಪರೀಕ್ಷೆ ನಡೆಸುವಾಗ, ಮಹಿಳಾ ಖೈದಿಗಳಲ್ಲಿ ಹೆಚ್ಚು ಪಾಸಿಟಿವ್ ವರದಿಗಳು ಬಂದಿವೆ. ಈ ಪರೀಕ್ಷೆಗಳನ್ನು ಜೈಲಿನ ವೈದ್ಯರು ನಡೆಸುತ್ತಿದ್ದಾರೆ.
ಅಧಿಕಾರಿಗಳು, ಡ್ರಗ್ಸ್ ಸೇವನೆಯ ಮಟ್ಟವನ್ನು ಅರ್ಥಮಾಡಿಕೊಳ್ಳಲು, ಸ್ಯಾಂಪಲ್ಸ್ ಅನ್ನು ನಿಮಾನ್ಸ್ ಗೆ ಕಳಿಸಿದ್ದಾರೆ. ವರದಿಯ ನಂತರ, ಖೈದಿಗಳಿಗೆ ಚಿಕಿತ್ಸೆ ನೀಡಲು ತಯಾರಿಯನ್ನ ಮಾಡಲಾಗುತ್ತದೆ. ವಿಚಾರಣಾ ಅಧೀನ ಖೈದಿಗಳಲ್ಲಿ ಮಾದಕ ವ್ಯಸನವು ಹೆಚ್ಚಾಗಿದೆ, ಆದರೆ ಸಜಾ ಖೈದಿಗಳಲ್ಲಿ ಈ ಸಮಸ್ಯೆ ಕಡಿಮೆ ಎಂದು ತಿಳಿದುಬಂದಿದೆ.
ರಾಜ್ಯದ ಜೈಲುಗಳಲ್ಲಿ ಡ್ರಗ್ಸ್ ಸೇರಿದಂತೆ ಎಂಡಿಎಂಎ, ಕೊಕೆಕೇನ್ ಮುಂತಾದ ಪದಾರ್ಥಗಳ ಸಪ್ಲೈಗೆ ಕಡಿವಾಣ ಹಾಕಲಾಗಿದೆ. ಡ್ರಗ್ಸ್ ಪರೀಕ್ಷೆ ನಡೆಸಿದಾಗ, ಮಹಿಳಾ ಖೈದಿಗಳು ಗಾಂಜಾ ಮತ್ತು ಇತರ ಡ್ರಗ್ಸ್ ಸೇವಿಸುತ್ತಿರುವುದಾಗಿ ತಿಳಿದುಬಂದಿದೆ. ಕೆಲವೊಂದು ಖೈದಿಗಳು ತಮ್ಮ ಮೂತ್ರದ ಸ್ಯಾಂಪಲ್ ಅನ್ನು ನೀರಿನಿಂದ ಮಿಕ್ಸ್ ಮಾಡಿ ತರಲು ಪ್ರಯತ್ನಿಸಿದ್ದಾರೆ.
ಬೆಂಗಳೂರು ಮತ್ತು ಮೈಸೂರು ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವ್ ವರದಿಗಳನ್ನು ನಿಮಾನ್ಸ್ ಗೆ ಕಳಿಸಲಾಗಿದೆ, ಮತ್ತು ಖೈದಿಗಳನ್ನು ರಿಹ್ಯಾಬ್ ಗೆ ಸೇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ ಜೈಲುಗಳಲ್ಲಿ ದಿನನಿತ್ಯ 10% ಪ್ರಮಾಣದಲ್ಲಿ ಡ್ರಗ್ಸ್ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
