Home Uncategorized Duniya Vijay: ದುನಿಯಾ ವಿಜಯ್ ಮೇಲೆ ಹಲ್ಲೆ ಪ್ರಕರಣ; ಪಾನಿಪುರಿ ಕಿಟ್ಟಿ ವಿರುದ್ಧ ಹೊಸ ಎಫ್​ಐಆರ್​

Duniya Vijay: ದುನಿಯಾ ವಿಜಯ್ ಮೇಲೆ ಹಲ್ಲೆ ಪ್ರಕರಣ; ಪಾನಿಪುರಿ ಕಿಟ್ಟಿ ವಿರುದ್ಧ ಹೊಸ ಎಫ್​ಐಆರ್​

12
0

ನಟ ದುನಿಯಾ ವಿಜಯ್​ ಮತ್ತು ಪಾನಿಪುರಿ ಕಿಟ್ಟಿ (Panipuri Kitty) ನಡುವಿನ ಕಿರಿಕ್​ ಈಗ ಹೊಸ ತಿರುವು ಪಡೆದುಕೊಂಡಿದೆ. 2018ರಲ್ಲಿ ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ವೇಳೆ ದುನಿಯಾ ವಿಜಯ್​ ಮಗನ ಮೇಲೆ ಪಾನಿಪುರಿ ಕಿಟ್ಟಿ ತಂಡದವರು ಹಲ್ಲೆ ಮಾಡಿದ್ದರು ಎಂಬ ಆರೋಪ ಎದುರಾಗಿತ್ತು. ನಂತರ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ದುನಿಯಾ ವಿಜಯ್​ (Duniya Vijay) ಹಲ್ಲೆ ಮಾಡಿದ್ದರು ಎಂದು ದೂರು ದಾಖಲಾಗಿತ್ತು. ಸಾಕ್ಷ್ಯದ ಕೊರತೆಯಿಂದ ಪ್ರಕರಣ ಕ್ಲೋಸ್​ ಆಗಿತ್ತು. ಆದರೆ ಈಗ ದುನಿಯಾ ವಿಜಯ್​ ಅವರು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ದಾಖಲಿಸಿದ್ದಾರೆ. ಕೋರ್ಟ್​ ಆದೇಶದ ಮೇರೆಗೆ ಪಾನಿಪುರಿ ಕಿಟ್ಟಿ ವಿರುದ್ಧ ಹೊಸದಾಗಿ ಎಫ್​ಐಆರ್​ (FIR) ದಾಖಲಿಸಲಾಗಿದೆ.

ಪಾನಿಪುರಿ ಕಿಟ್ಟಿ ಪ್ರತಿಕ್ರಿಯೆ:

ಹೊಸದಾಗಿ ಎಫ್​ಐಆರ್​ ದಾಖಲಾಗಿರುವುದಕ್ಕೆ ಪಾನಿಪುರಿ ಕಿಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಹಿಂದೆ ಕೂಡ ನ್ಯಾಯಾಲಕ್ಕೆ ಹೋಗಿದ್ದೆವು. ಈಗ ಮತ್ತೆ ಎಫ್​ಐಆರ್​ ಆಗಿದೆ. ಕೋರ್ಟ್​ನಲ್ಲಿ ನಮಗೆ ನಂಬಿಕೆ ಇದೆ. ಅಲ್ಲಿ ಯಾವ ರೀತಿಯ ತೀರ್ಪು ಬರುತ್ತೋ ಅದರಂತೆ ನಡೆದುಕೊಳ್ಳುತ್ತೇವೆ’ ಎಂದು ಪಾನಿಪುರಿ ಕಿಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಆಟೋದಲ್ಲಿ ಪ್ರಯಾಣಿಸಿದ ನಟ ದುನಿಯಾ ವಿಜಯ್; ಇದರ ಹಿಂದಿದೆ ಒಂದೊಳ್ಳೆಯ ಉದ್ದೇಶ

ರಾಜಿ ಆಗಲು ಸಿದ್ಧವಿಲ್ಲ:

ಹಳೇ ಪ್ರಕರಣ ಆಗಿದ್ದರಿಂದ ರಾಜಿ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ ರಾಜಿ ಆಗಲು ಸಾಧ್ಯವಿಲ್ಲ ಎಂದು ಪಾನಿಪುರಿ ಕಿಟ್ಟಿ ಹೇಳಿದ್ದಾರೆ. ‘ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಸರಿ ಮಾಡಿರುವವರಿಗೆ ಒಳ್ಳೆಯದು ಆಗಲೇಬೇಕು. ಕೋರ್ಟ್​ ಏನು ಹೇಳುತ್ತೋ ಅದರಂತೆ ನಡೆದುಕೊಳ್ಳುತ್ತೇವೆ. ಯಾರೂ ಕೂಡ ನಮ್ಮನ್ನು ರಾಜಿಗೆ ಕರೆದಿಲ್ಲ. ಕರೆದರೂ ನಾವು ರಾಜಿಗೆ ಹೋಗುವುದಿಲ್ಲ’ ಎಂದಿದ್ದಾರೆ ಪಾನಿ ಪುರಿ ಕಿಟ್ಟಿ.

ಇದನ್ನೂ ಓದಿ: Duniya Vijay: ‘ಭೀಮ’ ಸೆಟ್​ಗೆ ಭೇಟಿ ನೀಡಿ ದುನಿಯಾ ವಿಜಯ್​ಗೆ ವಿಶ್​ ಮಾಡಿದ ಶಿವಣ್ಣ-ಗೀತಾ ದಂಪತಿ

ಹೈದರಾಬಾದ್​ನಲ್ಲಿ ದುನಿಯಾ ವಿಜಯ್​:

ಸಿನಿಮಾ ಕೆಲಸಗಳ ಸಲುವಾಗಿ ದುನಿಯಾ ವಿಜಯ್​ ಅವರು ಹೈದರಾಬಾದ್​ನಲ್ಲಿ ಇದ್ದಾರೆ. ಹೊಸ ಎಫ್​ಐಆರ್​ ಕುರಿತಂತೆ ಅವರ ಕಡೆಯಿಂದ ಸ್ಯದಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ. ತೆಲುಗಿನ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ದುನಿಯಾ ವಿಜಯ್​ ಅವರು ನಂದಮೂರಿ ಬಾಲಕೃಷ್ಣ ಜೊತೆ ನಟಿಸಿದ್ದಾರೆ. ಈ ಚಿತ್ರ 2023ರ ಜನವರಿ 12ರಂದು ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here