Home ಬೆಂಗಳೂರು ನಗರ ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ ವೇಳೆ ಚಿನ್ನ ಇರೋ ಬ್ಯಾಗನ್ನ ಪಕ್ಕದ ಮನೆ ಕಾಂಪೌಂಡ್​ಗೆ ಎಸೆದ...

ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ ವೇಳೆ ಚಿನ್ನ ಇರೋ ಬ್ಯಾಗನ್ನ ಪಕ್ಕದ ಮನೆ ಕಾಂಪೌಂಡ್​ಗೆ ಎಸೆದ ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್

50
0

ಬೆಂಗಳೂರು: ತಮ್ಮ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಗೆ ಬರುತ್ತಿದ್ದಂತೆ ಅಧಿಕಾರಿಯೊಬ್ಬರು ಚಿನ್ನ ಮತ್ತು ಹಣ ಇದ್ದ ಬ್ಯಾಗ್‌ನ್ನು ಕಿಟಕಿಯಿಂದ ಪಕ್ಕದ ಮನೆಗೆ ಎಸೆದ ಘಟನೆ ನಡೆದಿದೆ.

ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್ ಅತ್ಹರ್ ಆಲಿ ಎಂಬವರ ನಿವಾಸ ಮತ್ತು ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಂಜಾನೆ 5:30 ರ ಹೊತ್ತಿಗೆ ಕಲ್ಯಾಣ ನಗರದಲ್ಲಿರುವ ನಿವಾಸಕ್ಕೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು.

ಈ ವೇಳೆ ಬಂಧನ ಭೀತಿಯಲ್ಲಿ ಮನೆಯಲ್ಲಿದ್ದ ಚಿನ್ನದ ಆಭರಣಗಳು, ವಜ್ರದ ಆಭರಣಗಳು, ಬೆಲೆ ಬಾಳುವ ಆಭರಣಗಳನ್ನು ಮೂಟೆಕಟ್ಟಿ ಪಕ್ಕದ ಮನೆಯ ಕಾಂಪೌಂಡ್​ ಒಳಗೆ ಎಸೆದಿದ್ದಾನೆ.

ಮೂಟೆ ಬಿದ್ದ ಸದ್ದಿಗೆ ಮನೆಯವರು ಕೂಡಲೆ ಹೊರಗಡೆ ಬಂದು ನೋಡಿದಾಗ ಚಿನ್ನದ ಮೂಟೆ ಕಂಡಿದೆ. ಕೂಡಲೇ ಮನೆಯವರು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ಪಕ್ಕದ ಮನೆಗೆ ತೆರಳಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಚಿನ್ನ ಎಸೆದಿರೋ ಬಗ್ಗೆ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಒಂದು ಬ್ಯಾಗ್ ತುಂಬಾ ಚಿನ್ನದ ವಸ್ತುಗಳು ಸಿಕ್ಕಿವೆ. ಸದ್ಯ ನೆರಮನೆಯಲ್ಲಿ ಅಧಿಕಾರಿಗಳ ತಂಡ ತಲಾಶ್ ಮುಂದುವರಿಸಿದೆ.

LEAVE A REPLY

Please enter your comment!
Please enter your name here