Home Uncategorized DVS: ಪಕ್ಷದ ಸೋಲಿಗೆ ಎಲ್ಲರೂ ಸಹ ಕಾರಣ, ಒಬ್ಬರೇ ಅಂತಾ ನಾನು ಹೇಳಲ್ಲ: ಸದಾನಂದಗೌಡ

DVS: ಪಕ್ಷದ ಸೋಲಿಗೆ ಎಲ್ಲರೂ ಸಹ ಕಾರಣ, ಒಬ್ಬರೇ ಅಂತಾ ನಾನು ಹೇಳಲ್ಲ: ಸದಾನಂದಗೌಡ

22
0

ಬೆಂಗಳೂರು: ಬಿಜೆಪಿಯ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ, ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋಗುವವರು ಎಲ್ಲಾ ಕಡೆ ಇದ್ದಾರೆ. ಅವರ ಜೊತೆ ಚರ್ಚಿಸುವ ವೇಳೆಯಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಇದು ನಮ್ಮ ವೈಫಲ್ಯ, ಪಕ್ಷದ ಸೋಲಿಗೆ ಎಲ್ಲರೂ ಸಹ ಕಾರಣ. ಸೋಲಿಗೆ ಒಬ್ಬರೇ ಕಾರಣ ಅಂತಾ ನಾನು ಹೇಳಲು ಹೋಗಲ್ಲ ಎಂದರು.

ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ ವಿದ್ಯುತ್ ಸಮಸ್ಯೆ ನಿಭಾಯಿಸುವಲ್ಲಿ ಸರ್ಕಾರ ವಿಫಲ ರೈತರಿಗೆ ಪರಿಹಾರ ಕೊಟ್ಟಿಲ್ಲ, ರೈತರ ಸಮಸ್ಯೆ ಆಲಿಸದೇ ಬೇಜವಾಬ್ದಾರಿ ನಡೆ ಸರ್ಕಾರ ತೋರಿಸ್ತಿದೆ ಸರ್ಕಾರದ ಎಸ್‌ಇ‌ಪಿ ತರುವ ನಿರ್ಧಾರ ರಾಜ್ಯ ಶಿಕ್ಷಣ ವಲಯಕ್ಕೆ ಅಪಾಯಕರ ಎಂದರು.

ಸಿಡಬ್ಲ್ಯೂಆರ್‌ಸಿ ಆದೇಶ ವಿಚಾರಕರ್ನಾಟಕದಲ್ಲಿ ನೀರಿಲ್ಲ ಬಿಡಲು ಆಗಲ್ಲ ಆದ್ರೆ ತಮಿಳುನಾಡಿನಲ್ಲಿ ನೀರಿನ ಅವಶ್ಯಕತೆ ಎಲ್ಲಿದೆ ಅಂತ ಅವರು ಪ್ರತಿಪಾದಿಸ್ತಿಲ್ಲ ನಮ್ಮವರು ಕುಡಿಯಲು ನೀರು ಅಗತ್ಯವಾಗಿ ಬೇಕು ಅನ್ನೋದನ್ನು ಪರಿಣಾಮಕಾರಿ ಆಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲ ಆಗಿದ್ದಾರೆ ಇದು ಸರ್ಕಾರದ, ಜಲಸಂಪನ್ಮೂಲ ಖಾತೆ ಸಚಿವರ ವೈಫಲ್ಯ ಎಂದರು.

ಬಿಜೆಪಿ ಶಾಸಕರ ಅನುದಾನ ವಾಪಸ್ ವಿಚಾರ ನಮ್ಮ ಶಾಸಕರ ಅನುದಾನ ವಾಪಸ್ ಪಡೆದಿರೋದು ಸರಿಯಲ್ಲ ಅನುದಾನ ವಾಪಸ್ ಪಡೆದಿರುವ ಹಿಂದೆ ಕಮೀಷನ್ ಪಡೆಯುವ ಉದ್ದೇಶ ಇದೆ  ಇನ್ನೂ ಹೆಚ್ಚಿನ ಕಮೀಷನ್ ಪಡೆಯುವ ಸಲುವಾಗಿ ಶಾಸಕರ ಅನುದಾನ ವಾಪಸ್ ಪಡೆದಿರಬಹು ಅನುದಾನ ವಾಪಸ್ ಹಿಂದೆ ಕಮೀಷನ್ ಹೆಚ್ಚು ಮಾಡುವ ಹುನ್ನಾರ ಇದೆ ಎಂದು ಹೇಳಿದರು.

 

The post DVS: ಪಕ್ಷದ ಸೋಲಿಗೆ ಎಲ್ಲರೂ ಸಹ ಕಾರಣ, ಒಬ್ಬರೇ ಅಂತಾ ನಾನು ಹೇಳಲ್ಲ: ಸದಾನಂದಗೌಡ appeared first on Ain Live News.

LEAVE A REPLY

Please enter your comment!
Please enter your name here