Home ಬೆಂಗಳೂರು ನಗರ E-Procurement 2.0 Portal, DIS Software Launched in Karnataka| ಇ-ಪ್ರೊಕ್ಯೂರ್‍ಮೆಂಟ್ 2.0 ಪೋರ್ಟಲ್, ಡಿಐಎಸ್...

E-Procurement 2.0 Portal, DIS Software Launched in Karnataka| ಇ-ಪ್ರೊಕ್ಯೂರ್‍ಮೆಂಟ್ 2.0 ಪೋರ್ಟಲ್, ಡಿಐಎಸ್ ತಂತ್ರಾಂಶ ಲೋಕಾರ್ಪಣೆ

217
0
E-Procurement 2.0 Portal

ಬೆಂಗಳೂರು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ 2.0 ಹಾಗೂ ಜಿಲ್ಲೆಗಳ ಪ್ರಗತಿ ಪರಿಶೀಲನೆ ಕುರಿತಂತೆ ಡಿಐಎಸ್ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು.

ಸೋಮವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮದ ಸಂದರ್ಭದಲ್ಲಿ ಪೋರ್ಟಲ್ ಅನ್ನು ಲೋಕಾರ್ಪಣೆ ಮಾಡಿದರು. ರಾಜ್ಯದ ಆಯವ್ಯಯದಲ್ಲಿ ಕೈಗೊಂಡ ಎಲ್ಲ್ಲ ಇಲಾಖೆಗಳ 1 ಕೋಟಿ ರೂ.ಗಳಿಗಿಂತ ಹೆಚ್ಚಿನ ಕಾಮಗಾರಿಗಳ ಪ್ರಗತಿಯನ್ನು ಸಮಯಬದ್ದವಾಗಿ ಮೇಲ್ವಿಚಾರಣೆ ಮಾಡಲು ಕಾಂಟ್ರಾಕ್ಟ್ ಮ್ಯಾನೇಜಮೆಂಟ್ ಮಾಡ್ಯೂಲ್‍ನಲ್ಲಿ ಡ್ಯಾಷ್ ಬೋರ್ಡ್‍ನ್ನು ಇ-ಆಡಳಿತ ಇಲಾಖೆಯ ವತಿಯಿಂದ ಸಿದ್ದಪಡಿಸಿದೆ. ಲಿಂಕ್ ಇಲ್ಲಿದೆ https://kppp.karnataka.gov.in

ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆ ಮತ್ತು ಅದರ ವ್ಯಾಪ್ತಿಯಲ್ಲಿರುವ ಎಲ್ಲ ಮಂಡಳಿಗಳು ಮತ್ತು ನಿಗಮಗಳಡಿ ನೀಡಲಾದ 50 ಲಕ್ಷ ರೂ.ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲ್ಲ ಟೆಂಡರ್‍ಗಳಿಗೆ ಮೂರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‍ನಲ್ಲಿ ಗುತ್ತಿಗೆ ನಿರ್ವಹಣಾ ಮಾಡ್ಯೂಲ್‍ನ್ನು ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಅದರಂತೆ ಇ-ಪ್ರೊಕ್ಯೂರ್‍ಮೆಂಟ್ ವೇದಿಕೆಯಲ್ಲಿ ಒಟ್ಟು 40ಸಾವಿರ ಟೆಂಡರ್‍ಗಳು ಪ್ರಕಟಿಸಲಾಗಿದ್ದು ಈ ಪೈಕಿ ಆಯ್ಕೆಯಾದ 3 ಇಲಾಖೆಗಳ 50 ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ ಕೇವಲ 3165 ಟೆಂಡರ್‍ಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. ಸದರಿ ಇಲಾಖೆಗಳಿಂದ ಕಾಂಟ್ರಾಕ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್‍ನಲ್ಲಿ ಕಡ್ಡಾಯವಾಗಿ ತಂತ್ರಾಂಶದ ಮೂಲಕ ಮಾಹಿತಿಯನ್ನು ಡ್ಯಾಶ್ ಬೋರ್ಡ್‍ನಲ್ಲಿ ಅಳವಡಿಸಲಾಗುವುದು.

ಡಿಐಎಸ್ ತಂತ್ರಾಂಶ: ಸಿಎಂ ಸೆ.12 ಮತ್ತು 13ರಂದು ನಡೆದ ‘ಜಿಲ್ಲಾಧಿಕಾರಿ ಮತ್ತು ಸಿಇಓಗಳ ಸಮ್ಮೇಳನ’ದಲ್ಲಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ, 28 ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿ ಪ್ರತಿ ತಿಂಗಳೂ ವರದಿಯನ್ನು ಸಲ್ಲಿಸಲು ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳಿಗೆ ಸೂಚಿಸಿರುತ್ತಾರೆ. ಹಾಗೂ ಅಭಿವೃದ್ಧಿ ಆಯುಕ್ತರಿಗೆ ಸದರಿ ವರದಿಗಳನ್ನು ವಿಶ್ಲೇಷಿಸಿ ಮಂಡಿಸುವಂತೆ ಸೂಚಿಸಲಾಗಿರುತ್ತದೆ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here