Home ಅಪರಾಧ ಎಟಿಎಂಗೆ ತುಂಬಿಸಬೇಕಿದ್ದ ಹಣ ಕಳ್ಳತನವಾಗಿದೆಯೆಂದು ಸುಳ್ಳು ದೂರು: ಪೊಲೀಸ್ ತನಿಖೆಯಲ್ಲಿ ಬ್ಯಾಂಕ್ ಸಿಬ್ಬಂದಿ ಲಾಕ್

ಎಟಿಎಂಗೆ ತುಂಬಿಸಬೇಕಿದ್ದ ಹಣ ಕಳ್ಳತನವಾಗಿದೆಯೆಂದು ಸುಳ್ಳು ದೂರು: ಪೊಲೀಸ್ ತನಿಖೆಯಲ್ಲಿ ಬ್ಯಾಂಕ್ ಸಿಬ್ಬಂದಿ ಲಾಕ್

19
0
False complaint that the money to be filled in the ATM was stolen: Bank staff locked in police investigation!

ಬೆಂಗಳೂರು: ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ದೂರು ಕೊಟ್ಟಿದ್ದ ಬ್ಯಾಂಕ್ ಸಿಬ್ಬಂದಿ ಕಳ್ಳಾಟ ಬಯಲಾಗಿದೆ. ತನಿಖೆ ಕೈಗೊಂಡ ಪೊಲಿಸರು, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ ವೇಳೆ ಏಜೆನ್ಸಿಯವರು ಸಿಕ್ಕಿಬಿದ್ದಿದ್ದಾರೆ.

ಹೌದು, ಬೆಡ್ ಶೀಟ್ ಹಾಕಿಕೊಂಡು ಬಂದು ಬೆಂಗಳೂರಿನ ಬೆಳ್ಳಂದೂರು ಎಟಿಎಂ ಕಳ್ಳತನ ಮಾಡಿದ್ದ ಕೇಸ್​ಗೆ ಮೇಜರ್ ಟ್ವಿಸ್ಟ್‌ ಸಿಕ್ಕಿದೆ. ಹೌದು, ಪೊಲೀಸರ ತ‌ನಿಖೆಯಲ್ಲಿ 16.5 ಲಕ್ಷ ರೂ. ಹಣ ಕಳ್ಳತನ ಆಗಿದೆ ಎಂದು ದೂರು ಕೊಟ್ಟ ಬ್ಯಾಂಕ್ ಕಳ್ಳಾಟ ಬೆಳಕಿಗೆ ಬಂದಿದೆ. ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ.

ಇದುವರೆಗೂ ಐವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್, ಎಟಿಎಂ ಆಫಿಸರ್ ಪವನ್ ಕಲ್ಯಾಣ್(28), ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರ ಎಟಿಎಂ ಇನ್ ಚಾರ್ಜ್ ಧರ್ಮೇಂದ್ರ(52), ಸೆಕ್ಯೂರ್ ವ್ಯಾಲ್ಯೂ ಕಂಪನಿ ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ ( 36), ಸೆಕ್ಯೂರ್ ವ್ಯಾಲ್ಯೂ ಕಂಪನಿ ಅಸ್ಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಎಂಬುವವರು ಬಂಧಿತರು ಎನ್ನಲಾಗಿದೆ.

ಬೆಳ್ಳಂದೂರು ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಕಳ್ಳರ ಗ್ಯಾಂಗ್, ಎಟಿಎಂ ಕಟ್ ಮಾಡಿ ಕಳ್ಳತನ ಮಾಡಿದ್ದರು. ಆದ್ರೆ, ಆ ಗ್ಯಾಂಗ್​ಗೆ ಕೇವಲ 5 ಸಾವಿರ ಹಣ ಮಾತ್ರ ಸಿಕ್ಕಿದೆ. ಆದ್ರೆ, ಮರುದಿನ ಬ್ಯಾಂಕ್ ಸಿಬ್ಬಂದಿ 16.5 ಲಕ್ಷ ಕಳ್ಳತನ ಆಗಿದೆ ಎಂದು ದೂರು ನೀಡಿದ್ದರು. ಬ್ಯಾಂಕ್ ಸಿಬ್ಬಂದಿ ದೂರಿನ ಬಳಿಕ ಸಿಸಿ ಕ್ಯಾಮೆರಾ ಪರಿಶೀಲನೆಗೆ ಮುಂದಾಗಿದ್ದ ಪೊಲೀಸರಿಗೆ, ಕಳ್ಳತನ ಆದ ಹಿಂದಿನ ದಿನದ ವೀಡಿಯೋಯಿಂದ ಕ್ಲೂ ಸಿಕ್ಕಿತ್ತು. ಹಣ ಹಾಕಲು ಬಂದಿದ್ದ ಏಜೆನ್ಸಿಯವರು ಹಣವೇ ಹಾಕಿರಲಿಲ್ಲ. ಕೆಲ ಟೆಕ್ನಿಕಲ್ ಎರರ್ ಕಾರಣಕ್ಕೆ ರಿಸಿಪ್ಟ್ ಮಾತ್ರ ಬಂದಿದ್ದು, ಹಣ ಹಾಕಿರಲಿಲ್ಲ. ಮರುದಿನವೇ ಕಳ್ಳತನ ಆಗಿದ್ದು, ಹಣ ಹಾಕಿದ್ದೀವಿ, ಅದೇ ಹಣ ಕಳ್ಳತನ ಆಗಿದೆ ಎಂದು ಏಜೆನ್ಸಿಯವರು ಹೇಳಿದ್ದಾರೆ. ಇತ್ತ ಏಜೆನ್ಸಿಯವರ ಮಾತಿನಂತೆ ಆಕ್ಸಿಸ್ ಬ್ಯಾಂಕ್ ಸಿಬ್ಬಂದಿ ದೂರು ನೀಡಿದ್ದರು.

LEAVE A REPLY

Please enter your comment!
Please enter your name here