ಬೆಂಗಳೂರು:
ನಗರದ ಹೊಸಗುಡ್ಡದಹಳ್ಳಿಯ ಕೆಮಿಕಲ್ ಗೋದಾಮಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಲೀಕರ ವಿರುದ್ಧ ಮತ್ತೊಂದು ಎಫ್ಐ್ಆರ್ ದಾಖಲಾಗಿದೆ.
ಶಂಭುಲಿಂಗ ಎಂಬುವರು ರೇಖಾ ಕೆಮಿಕಲ್ಸ್ ವಿರುದ್ಧ ಸ್ಫೋಟಕ ನಿಯಂತ್ರಣ ಕಾಯ್ದೆಯಡಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಐಪಿಸಿ ಸೆಕ್ಷನ್ 427, 338, 285 ಅಡಿ ಎಫ್ಐಟಆರ್ ದಾಖಲಾಗಿದೆ.
ತಾವು ಟೀ ಕುಡಿದು ಬರುವಷ್ಟರಲ್ಲಿ ತಮ್ಮ ಲಗೇಜ್ ಟೆಂಪೋಗೆ ಬೆಂಕಿ ಹೊತ್ತಿಕೊಂಡಿದ್ದು, ಇದೇ ರೀತಿ ಸ್ಥಳದಲ್ಲಿದ್ದ ಉಳಿದ ಐದು ಕಾರು ಹಾಗೂ ಎರಡು ಬೈಕ್ಗೆಳು ಸಹ ಬೆಂಕಿಗಾಹುತಿ ಎಂದು ಅವರು ಆರೋಪಿಸಿದ್ದಾರೆ.
ಕೆಮಿಕಲ್ಸ್ ಗೋದಾಮಿನಲ್ಲಿ ಕೆಲಸದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ಮಾಲೀಕರ ಎಡವಟ್ಟಿನಿಂದಲೇ ಈ ಅವಘಡ ಸಂಭವಿಸಿದ್ದು, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈಗಾಗಲೇ ಪೊಲೀಸರು ಕಂಪನಿ ಮಾಲೀಕ ಸಜ್ಜನ್ ರಾಜ್, ಪತ್ನಿ ಕಮಲಾ ಹಾಗೂ ಅನಿಲ್ ಕುಮಾರ್ ಅವರನ್ನು ಬಂಧಿಸಿದ್ದಾರೆ.