Home ಕರ್ನಾಟಕ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ: ಬೆಳಗ್ಗೆ 11 ಗಂಟೆವರೆಗೆ ಶೇ 22.34 ರಷ್ಟು...

ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ: ಬೆಳಗ್ಗೆ 11 ಗಂಟೆವರೆಗೆ ಶೇ 22.34 ರಷ್ಟು ಮತದಾನವಾಗಿದೆ

22
0
Voting in Karnataka

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ಬೆಳಗ್ಗೆ 11 ಗಂಟೆವರೆಗೆ ಶೇ 223.4 ರಷ್ಟು ಮತದಾನವಾಗಿದೆ.

ಬೆಂಗಳೂರು ಉತ್ತರ (ಶೇ 19.78), ಬೆಂಗಳೂರು ದಕ್ಷಿಣ (ಶೇ 19.81), ಬೆಂಗಳೂರು ಸೆಂಟ್ರಲ್ (ಶೇ 19.21), ಬೆಂಗಳೂರು ಗ್ರಾಮಾಂತರ (ಶೇ 20.35), ಮೈಸೂರು-ಕೊಡಗು (ಶೇ 25.09), ಚಾಮರಾಜನಗರ (ಶೇ 22.81), ಮಂಡ್ಯ (ಶೇ 21.24), ತುಮಕೂರು (ಶೇ 22.32), ಕೋಲಾರ (ಶೇ 20.76), ಹಾಸನ (ಶೇ 22.03), ಉಡುಪಿ-ಚಿಕ್ಕಮಗಳೂರು ಚಿಕ್ಕಬಳ್ಳಾಪುರ (ಶೇ 29.03), ದಕ್ಷಿಣ ಕನ್ನಡ (ಶೇ 30.98), ಚಿತ್ರದುರ್ಗ (ಶೇ 21.75) ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.

ಬೇಸಿಗೆ ಬಿಸಿಲಿನ ಅಬ್ಬರದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಉದ್ದದ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.

ಕಳೆದ ಕೆಲದಿನಗಳಿಂದ ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು, ಬೆಳಗ್ಗೆ ಎಂಟು ಗಂಟೆಯಿಂದಲೇ ಬಿಸಿಲು ಉದ್ಯಾನನಗರಿಯ ಜನರನ್ನು ಕಂಗೆಡಿಸಿದೆ. ಹೀಗಾಗಿ ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಲು ಮತದಾರರು ಮತಗಟ್ಟೆಗಳಿಗೆ ಅತ್ಯಂತ ಉತ್ಸಾಹದಿಂದಲೇ ಆಗಮಿಸಿ ಹಕ್ಕು ಚಲಾವಣೆ ಮಾಡಿ ಸಂಭ್ರಮಿಸಿದರು.

ಯುವ ಮತದಾರರು, ಹಿರಿಯ ನಾಗರಿಕರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತ ಮತ ಹಾಕಿದರು. ನಗರದಲ್ಲಿ ಯಾವುದೇ ಅಹಿತಕರ ಘಟನೆ, ಗೊಂದಲಗಳಿಲ್ಲದೆ ತಮ್ಮ ಹಕ್ಕು ಚಲಾಯಿಸಿದರು.

LEAVE A REPLY

Please enter your comment!
Please enter your name here