Home ಬೆಂಗಳೂರು ನಗರ ಹಳೆ ಪಿಂಚಣಿ ಜಾರಿಗೆ ಸಮಿತಿ ರಚನೆ ಹಾಗೂ ಸಂಬಂಧಿಸಿದ ಸಂಸ್ಥೆಗಳ ಜೊತೆಗೆ ಸಮಾಲೋಚನೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಹಳೆ ಪಿಂಚಣಿ ಜಾರಿಗೆ ಸಮಿತಿ ರಚನೆ ಹಾಗೂ ಸಂಬಂಧಿಸಿದ ಸಂಸ್ಥೆಗಳ ಜೊತೆಗೆ ಸಮಾಲೋಚನೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

45
0
Formation of Old Pension Implementation Committee and consultation with concerned organizations: Deputy Chief Minister D.K.Sivakumar
Formation of Old Pension Implementation Committee and consultation with concerned organizations: Deputy Chief Minister D.K.Sivakumar

ಬೆಂಗಳೂರು:

ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ವೈ. ನಾರಾಯಣ ಸ್ವಾಮಿ ಅವರು ನಿಯಮ 72 ರಡಿ 01.04.2006ರ ನಂತರ ಸೇವೆಗೆ ಸೇರಿರುವ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಲಕ್ಷಾಂತರ ನೌಕರರಿಗೆ ನಿವೃತ್ತಿಯ ನಂತರ ಯಾವುದೇ ರೀತಿಯ ಆರ್ಥಿಕ ಸೌಲಭ್ಯ ದೊರೆಯದೇ ನಿವೃತ್ತಿ ಜೀವನ ನಡೆಸುವುದು ಕಷ್ಟವಾಗಿದೆ ಇತ್ತೀಚೆಗೆ ರಾಜಸ್ಥಾನ ಸರ್ಕಾರವು ತನ್ನ 2022 -23ನೇ ಸಾಲಿನ ಆಯವ್ಯಯ ಮುಂಗಡ ಪತ್ರದಲ್ಲಿ ಅಲ್ಲಿನ ಸರ್ಕಾರಿ ನೌಕರರಿಗೆ ನೂತನ ಪಿಂಚಣಿಯನ್ನು ರದ್ದುಗೊಳಿಸಿ ಹಳೇ ಪಿಂಚಣಿಯ ಯೋಜನೆಯನ್ನು ಮುಂದುವರೆಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

ಅದೇ ಮಾದರಿಯಲ್ಲಿ ದಿ:01.04.2006 ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳ ಪಿಂಚಣಿ ಯೋಜನೆಯನ್ನು ಮುಂದುವರೆಸುವ ವಿಚಾರವಾಗಿ ಸದನದ ಗಮನ ಸೆಳೆದರು. ಇದಕ್ಕೆ ಸಭಾನಾಯಕರಾದ ಭೋಸರಾಜು ಉತ್ತರಿಸಿ

ಹಳೆಯ ಪಿಂಚಣಿ ಯೋಜನೆಯ ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಕಷ್ಟ ನಿಧಿಯ ಆಧಾರ ಇಲ್ಲದಿರುವುದರಿಂದ ಹಾಗೂ ರಿಸರ್ವ್ ಬ್ಯಾಂಕ್‌ ರವರು ರಚಿಸಿದ ಸಮಿತಿಯ ವರದಿಯ ಶಿಫಾರಸ್ಸಿನ ಆಧಾರದ ಮೇಲೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದಿನಾಂಕ:01.01.2004 ರಿಂದ ಜಾರಿಗೊಳಿಸಿರುತ್ತದೆ. ಅದರಂತೆಯೇ ಇತರೆ ರಾಜ್ಯಗಳು ಈ ಯೋಜನೆಯನ್ನು ಅಳವಡಿಸಿಕೊಂಡ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯವು ಕೂಡ ಸರ್ಕಾರದ ಆದೇಶ ಸಂಖ್ಯೆ: ಆಇ (ಎಸ್.ಪಿ.ಎಲ್.) 04 ಪಿಇಟಿ 2005, ದಿನಾಂಕ 31.03.2006 ರನ್ವಯ ದಿನಾಂಕ:01.04.2005 ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ರಾಷ್ಟ್ರೀಯ ಎಂಚಣಿ ಯೋಜನೆಯನ್ನು ಜಾರಿಗೊಳಿಸಿರುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಇರುವ ಸೌಲಭ್ಯಗಳ ವಿವರ ಕೆಳಕಂಡಂತಿದೆ:-

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳವಡುವ ಸರ್ಕಾರಿ ನೌಕರರಿಗೆ ಸರ್ಕಾರದ 2018, .ಸರ್ಕಾರದ ಆದೇಶ ಸಂಖ್ಯೆ: ಆಇ 34 ಪಿಇಎನ್ 2018, ದಿನಾಂಕ: 23.06-18 ಆದೇಶದ ಸಂಖ್ಯೆ, ಆಇ-ಪಿಇಎನ್/264/2021, ದಿನಾಂಕ: 30,05 2022 ಮತ್ತು ಸರ್ಕಾರದ ಆದೇಶ ಸಂಖ್ಯೆ: ಆಇ-ಪಿಇಎನ್ 149/2022, ದಿನಾಂಕ: 19.10.2022 ರನ್ವಯ ನಿವೃತ್ತಿ ಉಪದಾನ, ಮರಣ, ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯಗಳನ್ನು ದಿನಾಂಕ: 01.04.2006ರಿಂದಲೇ ಜಾರಿಗೆ ಬರುವಂತೆ ವಿಸ್ತರಿಸಿ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ ಎಫ್‌.ಡಿ. (ಎಸ್.ಪಿ.ಎಲ್) 203 ಪಿಇಎನ್ 2012 ಪಿ ದಿನಾಂಕ: 18.05.2016 ಮತ್ತು ಸರ್ಕಾರದ ಆದೇಶ ಸಂ.ಆಇ 201 ಪಿಇಎನ್ 2021 ದಿನಾಂಕ 29.11.2021ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೌಕರರ ನಿವೃತ್ತರಾದರೆ/ಸೇವೆಯಲ್ಲಿರುವಾಗಲೇ ಸಂದರ್ಭದಲ್ಲಿ ಅವರುಗಳ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಈ ಕೆಳಕಂಡಂತೆ ಇತ್ಯರ್ಥಪಡಿಸಲಾಗುವುದು.

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನಿವೃತ್ತಿ ಹೊಂದಿದ ನೌಕರರ ಪ್ಲಾನ್ ಖಾತೆಯಲ್ಲಿ ರೂ. 5.00 ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ ನೌಕರ ಖಾತೆಯಲ್ಲಿರುವ ಸಂಪೂರ್ಣ ಇತ್ಯರ್ಥಪಡಿಸಲಾಗುವುದು ಹಾಗೂ ಪ್ರಾನ್ ಖಾತೆಯಲ್ಲಿನ ಮೊತ್ತವು ರೂ. 5.0 ಲಕ್ಷಕ್ಕಿಂತ ಮೇಲ್ಮಟ್ಟಿದರ ಪಾನ್ ಖಾತೆಯಲ್ಲಿರುವ 60% ಮೊತ್ತವನ್ನು ನೌಕರರು ಹಿಂಪಡೆಯಬಹುದಾಗಿದ್ದು, ಉಳಿದ 40% ಮೊತ್ತವನ್ನು ಕಡ್ಡಾಯವಾಗಿ Annuity Service Provider ಯಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸೇವಗೆ ರಾಜಿನಾಮೆ ನೀಡಿದ ನೌಕರರ

ಪ್ರಾನ್ ಖಾತೆಯಲ್ಲಿ ರೂ. 2.50 ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ ನೌಕರರ ಖಾತಯಲ್ಲಿನ ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು. ನೌಕರರ ಪ್ರಾನ್ ಖಾತೆಯಲ್ಲಿನ ಮೊತ್ತವು ರೂ. 2.50 ಲಕ್ಷಕ್ಕಿಂತ ಮೇಲ್ಮಟ್ಟ ದರ ಶೇ.20% ರಷ್ಟು ಮೊತ್ತವನ್ನು, ನೌಕರರು ಹಿಂಪಡೆಯಬಹುದಾಗಿದ್ದು, ಉಳಿಕ ಶೇ 80% ಮೊತ್ತವನ್ನು ಕಡ್ಡಾಯವಾಗಿ Annuity Service Provider ಅಲ್ಲಿ ಪಡೆಯಬೇಕಿರುತ್ತದೆ.

ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಪ್ರಾನ್ ಖಾತೆಯಲ್ಲಿ ರೂ. 5.00 ಲಕ್ಷಕ್ಕಿಂತ ಕಡಿಮೆ ಮೊತ್ತವಿದರೆ, ಮೃತರ ನಾಮನಿರ್ದೇಶಿತರಿಗೆ ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು. ಫ್ರಾನ್ ಖಾತೆಯಲ್ಲಿನ ಮೊತ್ತವು 5.00 ಲಕ್ಷಕ್ಕಿಂತ ಮೇಲ್ಮಟ್ಟಿದ್ದರೆ ಪ್ರಾನ್ ಖಾತೆಯಲಿರುವ ಶೇ 20 ರಷ್ಟು ಮೊತ್ತವನ್ನು, ಮೃತರ ನಾಮನಿರ್ದೇಶಿತರಿಗೆ ಇತ್ಯರ್ಥಪಡಿಸಲಾಗುವುದು ಹಾಗೂ 80% ರಷ್ಟು ಮೊತ್ತವು ಕಡ್ಡಾಯವಾಗಿ Annuity Service Provider’ ಯಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದರೆ ಸರ್ಕಾರದಿಂದ ನೌಕರರ ಕುಟುಂಬಕ್ಕೆ ಈ ಸೌಲಭ್ಯ ನೀಡಲಾಗುತ್ತದೆ

ಎನ್‌.ಪಿ.ಎಸ್‌., ನೌಕರರು, ದಿನಾಂಕ: 01,04 2006 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ ಕುಟುಂಬಕ್ಕೆ ಮರಣ ಉಪದಾನವನ್ನು ಸರ್ಕಾರದ ಆದೇಶ ಸಂಖ್ಯೆ ಆಇ/24/ಪಿ.ಇ ಎನ್/2018 ದಿನಾಂಕ 23,06 2018 ಮತ್ತು ಸರ್ಕಾರದ ಆದೇಶ ಸಂಖ್ಯೆ ಆಇ-ಪಿಇಎನ್/149/2022, ದಿನಾಂಕ, 19.10.2022 ರನ್ವಯ ಕುಟುಂಬ ಪಿಂಚಣಿ ಮತ್ತು ಮರಣ ಉಪದಾನ ಸೌಲಭ್ಯಗಳನ್ನು ಪಡೆಯಬಹುದು.

ಎನ್.ಪಿ.ಎಸ್ ನೌಕರರಿಗೆ ಆರ್ಥಿಕವಾಗಿ ಅನುಕೂಲವಾಗಲೆಂದು Tier-1 ಪ್ರಾನ್ ಖಾತೆಯಿಂದ ಭಾಗಶಃ ಮೊತ್ತವನ್ನು ಹಿಂಪಡೆಯಲು ಸರ್ಕಾರದ ಆದೇಶ ಸಂ: FD (SPL) 69 PEN 2016 ದಿನಾಂಕ:26.06 2018ರಲ್ಲಿ ಆದೇಶಿಸಲಾಗಿದೆ, ಸದರಿ ಆದೇಶದ ಅನ್ವಯ 3 ವರ್ಷದ ಸೇವೆಯನ್ನು ಪೂರೈಸಿದ ಎನ್.ಪಿ.ಎಸ್ .ನೌಕರನ ವಂತಿಗೆಯ ಶೇ.25% ಮೊತ್ತವನ್ನು (ಹೂಡಿಕೆ ಮೇಲಿನ ಆದಾಯವನ್ನು ಹೊರತುವಡಿಸಿ) ಕಳಕಾಣಿಸಿದ ಸಂದರ್ಭಗಳಲ್ಲಿ ಮಾತ್ರ ಹಿಂಪಡೆಯಬಹುದಾಗಿರುತ್ತದೆ

ಮಕ್ಕಳ ಹೆಚ್ಚಿನ ವಿದ್ಯಾಭಾಸಕ್ಕಾಗಿ, ಮಕ್ಕಳ ಮದುವೆಯ ಸಂಬಂಧ, ಗೃಹ ನಿರ್ಮಾಣ/ ಖರೀದಿ ಸಂಬಂಧ, ವೈದ್ಯಕೀಯ ಕಾರಣ ನಿಮಿತ್ತ ,

ನೌಕರರ ವಿದ್ಯಾಭ್ಯಾಸ ಹಾಗೂ ಕೌಶಲತ ಹಚ್ಚಿಸಿಕೊಳ್ಳಲು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಈ ರೀತಿ ಸೇವಾ ಅವಧಿಯಲ್ಲಿ ಮೂರು ಬಾರಿ ಭಾಗಶ: ಹಣ ಹಿಂಪಡೆಯಲು ಅವಕಾಶವಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ: ಆಇ 181 ಪಿಇಎನ್ 2021, ದಿನಾಂಕ: 06.12.2021ರಲ್ಲಿ ಎನ್.ಪಿ.ಎಸ್. ನೌಕರರಿಗೆ ಪಿಂಚಣಿ ನಿಧಿ ಮತ್ತು ಹೂಡಿಕೆ ಮಾದರಿಯ ಯಾವುದಾದರು ಒಂದು ಪಿಂಚಣಿ ನಿಧಿ ವ್ಯವಸ್ತ್ರಾವಕರನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಆಇ-ಪಿಇಎನ್/89/2023, ದಿನಾಂಕ 01.03.2023ರಲ್ಲಿ ರಾಜ್ಯದಲ್ಲಿ ಜಾರಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸುವ ಸಂಬಂಧ ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶಿಸಿದೆ ಎಂದರು.

ತದನಂತರ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಂಕನೂರ, ಭೋಜೇಗೌಡ, ಮುಂತಾದವರು ಈ ಕುರಿತು ಮಾತನಾಡಿದರು. ನಂತರ ಉತ್ತರಿಸಿದ ಉಪಮುಖ್ಯಮಂತ್ತಿ ಡಿ.ಕೆ.ಶಿವಕುಮಾರ್,ಸರ್ಕಾರಿ ನೌಕರರು ನಮ್ಮ ರಾಷ್ಟ್ರದ ನಿರ್ಮಾತೃಗಳು. ಅವರ ಏಳ್ಗೆಗೆ ಸರ್ಕಾರ ಬದ್ದವಾಗಿದೆ. ರಾಜಾಸ್ಥಾನ ಹಾಗೂ ಮಧ್ಯಪ್ರದೇಶದ ರಾಜ್ಯಗಳು ಮತ್ತೆ ಹಳೆ ಪಿಂಚಣಿ ಜಾರಿಗೊಳಿಸಿದೆ. ಹಳೆ ಪಿಂಚಣಿ ಜಾರಿಗೆ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಸಂಸ್ಥೆಗಳು, ಜನಪ್ರತಿನಿಧಿಗಳು , ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ‌ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದರು

LEAVE A REPLY

Please enter your comment!
Please enter your name here