ಬೆಂಗಳೂರು:
ಮಲ್ಲೇಶ್ವರ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶುಕ್ರವಾರ ಬೆಳಗ್ಗೆ ಕ್ಷೇತ್ರದ ವಿವಿಧೆಡೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಅಧಿಕಾರಿಗಳ ಜತೆ ಗಾಯತ್ರಿ ನಗರ ವಾರ್ಡ್‌ಗೆ ಭೇಟಿ ಕೊಟ್ಟ ಅವರು, ಆ ವಾರ್ಡ್‌ನ ಆರನೇ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ ವೀಕ್ಷಣೆ ಮಾಡಿದರು. ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೆ, ಆ ಪ್ರದೇಶದಲ್ಲಿ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
65ನೇ ವಾರ್ಡ್ ನಲ್ಲಿ ಇರುವ ಚಂದ್ರಶೇಖರ್ ಆಜಾದ್ ಮೈದಾನ ಹಾಗೂ ಕೆಂಪೇಗೌಡ ಆಟದ ಮೈದಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.
ಸುಬ್ರಹ್ಮಣ್ಯ ನಗರದ ಸರ್ಕಾರಿ ಆಂಗ್ಲ ಶಾಲೆಯ ಕಾಮಗಾರಿ ನಡೆಯುತ್ತಿದ್ದು ಅದನ್ನು ವೀಕ್ಷಿಸಿದರು.
ಮಲ್ಲೇಶ್ವರ 8ನೇ ಮುಖ್ಯರಸ್ತೆ ಹಾಗೂ 8 ನೇ ಅಡ್ಡ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಮತ್ತು ಸ್ಯಾನಿಟರಿ ಲೈನ್ ಸ್ಥಳಾಂತರ ಸಂಬಂಧ ನಡೆಯುತ್ತಿರುವ ಕಾಮಗಾರಿಗಳನ್ನೂ ವೀಕ್ಷಿಸಿದರು.
ಸ್ಥಳೀಯ ಜನರಿಂದಲೂ ಡಾ.ಅಶ್ವತ್ಥನಾರಾಯಣ ಮಾಹಿತಿ ಪಡೆದುಕೊಂಡರಲ್ಲದೆ, ಮುಂದಿನ ಶೀಘ್ರವೇ ಕಾಮಗಾರಿ ಮುಗಿಸಿ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಸಂಕ್ಷಿಪ್ತ ವರದಿ- 30/07/2021
— Dr. Ashwathnarayan C. N. (@drashwathcn) July 30, 2021
Brief round-up of today's activities-
Inspected several ongoing works at Malleshwara constituency. New playground, parks, recharge pits, & pipeline works are progressing. Officials have been instructed to complete the projects soon.#ModelMalleshwaram pic.twitter.com/z0OcsEVB5P
ಬಳಿಕ ಮಾತನಾಡಿದ ಅವರು, ಮಲ್ಲೇಶ್ವರ ಕ್ಷೇತ್ರದಲ್ಲಿ ಹಳೆಯದಾಗಿದ್ದ ಕಾವೇರಿ ಪೈಪ್‌ಲೈನ್ ಬದಲಾವಣೆ ಮಾಡುವ ಕೆಲಸ ಭರದಿಂದ ನಡೆಯುತ್ತಿದೆ. ನೀರಿನ ಸೋರಿಕೆ ಹಾಗೂ ಸ್ವಚ್ಛ ನೀರು ಪೂರೈಕೆ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಗಾಯತ್ರಿನಗರ ವಾರ್ಡ್‌ನಲ್ಲಿಯೂ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಪಾಪರೆಡ್ಡಿ, ಮಲ್ಲೇಶ್ವರ ಬಿಇಒ ಉಮಾದೇವಿ ಸೇರಿದಂತೆ ಇತರರು ಇದ್ದರು.