ಕೊಪ್ಪಳ:
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಹಾಗೂ ರಾಜ ವಂಶಸ್ಥ ಶ್ರೀರಂಗದೇವರಾಯಲು(87) ಅವರು ಮಂಗಳವಾರ ನಿಧನವಾಗಿದ್ದಾರೆ.
ಶ್ರೀರಂಗದೇವರಾಯಲು ಅವರು ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಶ್ರೀರಂಗದೇವರಾಯಲು ಅವರು ಪತ್ನಿ ಲಲಿತಾರಾಣಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವಿಜಯಸಾಮ್ರಾಜ್ಯದ ವಂಶಸ್ಥರಾಗಿದ್ದ ಶ್ರೀರಂಗದೇವರಾಯಲು ಅವರು 1974ರಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು. ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರದಿಂದ ಐದು ಬಾರೀ ಶಾಸಕರಾಗಿದ್ದರು.
ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀರಂಗದೇವರಾಯಲು ಅವರ ನಿಧನಕ್ಕೆ ಗಣ್ಯರ ಕಂಬನಿ ಮಿಡಿದಿದ್ದಾರೆ.