ಬೆಂಗಳೂರು:
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು, ಮನೆ ಮಾಲೀಕರಿಗೆ ಅನುದಾನದ ಚೆಕ್ಚ ಗಳನ್ನು ಮಾಜಿ ಸಚಿವರು , ಸ್ಥಳೀಯ ಶಾಸಕರಾದ ವಿ.ಸೋಮಣ್ಣರವರು ಅರ್ಹ ಫಲಾನುಭವಿಗಳಿಗೆ ಚಕ್ಕುಗಳನ್ನು ವಿತರಣೆಯ ಮಾಡಿದರು.
ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ವಿಶ್ವನಾಥ್ ಗೌಡ ಹಾಗೂ ಮಾಜಿ ಬಿಬಿಎಂಪಿ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ ,ಮೋಹನ್ ಕುಮಾರ್ ,ವಾಗೇಶ್ ಶ್ರೀಮತಿ ರೂಪಲಿಂಗೇಶ್ವರ್ ,ರಾಜೇಶ್ವರಿ ಬೆಳಗೊಡ್, ಶಂಕುತಲ ಡೊಡ್ಡಲಕ್ಕಪ್ಪರವರು ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿ.ಸೋಮಣ್ಣರವರು ಮಾತನಾಡಿ ಪ್ರತಿಯೊಬ್ಬ ಕುಟುಂಬದವರಿಗೆ ಸ್ವಂತಸೂರು ಇರಬೇಕು ಮತ್ತು ಸುಸಜ್ಜಿತ ಮನೆ ನಿರ್ಮಿಸಬೇಕು ಎಂದು ಆಸೆ ಹೊಂದಿರುತ್ತಾರೆ .ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9ವಾರ್ಡ್ ಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸ್ವಂತ ಜಾಗದಲ್ಲಿ ಶೀಟ್ ಮನೆಯಲ್ಲಿ ವಾಸವಿರುವವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 15×20 ಮತ್ತು 20×30 ಚದರ ಅಡಿಯಲ್ಲಿ ವಾಸಿಸುವ ನಿವಾಸಿಗಳಿಗೆ ಪ್ರತಿ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಹಣ ನೀಡಲಾಗುತ್ತಿದೆ .
ಕೊರೋನ ಎರಡನೇಯ ಅಲೆಯಿಂದ ಬಡವರು ಹಸಿವಿನಿಂದ ಬಳಲಬಾರದು 1ಲಕ್ಷ ದಿನಸಿ ಧಾನ್ಯಗಳ ಕಿಟ್ ನೀಡಲಾಗಿದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ನನಲ್ಲಿ 100ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯುಧುನಿಕ ವೈದ್ಯಕೀಯ ಉಪಕರಣ ಆಳವಡಿಕೆ ಮಾಡಿರುವ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುತ್ತಿದೆ.
ಪ್ರತಿಯೊಬ್ಬರ ಮನೆಯು ಮಂತ್ರಾಲಯವಾಗಬೇಕು ,ಮನಸ್ಸು ದೇವಾಲಯವಾಗಬೇಕು ಆಗ ಉತ್ತಮ ಸಮಾಜ ನೋಡಲು ಸಾಧ್ಯ ಎಂದು ಹೇಳಿದರು.