ಬೆಂಗಳೂರು:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಮೂವರು ಸಚಿವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಡಿಕೆ ಶಿವಕುಮಾರ್ ಅವರಿಗೆ ಅವರ ಆಸೆಯಂತೆ 335, 336, 337, 337A ಸಂಖ್ಯೆಯ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. ಜ್ಯೋತಿಷಿ ಬಿಬಿ ಆರಾಧ್ಯ ಅವರ ಸಲಹೆಯಂತೆ ಲಕ್ಕಿ ನಂಬರ್ ಕೊಠಡಿ ಸಂಖ್ಯೆಯನ್ನು ಡಿಕೆಶಿ ಕೇಳಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಅವರು ಗುರುವಾರ(ಮೇ 25) ಮಧ್ಯಾಹ್ನತಮ್ಮ ಕೊಠಡಿ ಸಂಖ್ಯೆ 336ರಲ್ಲಿ ಪೂಜೆ ನೆರವೇರಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಅವರ ಕೊಠಡಿಗಳಿಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯ ನಡೆದಿದೆ.
ಇನ್ನು ಸಚಿವರಾದ ಜಿ ಪರಮೇಶ್ವರ್ ಅವರಿಗೆ 327-327ಎ ಸಂಖ್ಯೆಯ ಕೊಠಡಿ ನೀಡಲಾಗಿದೆ. ರಾಮಲಿಂಗಾರೆಡ್ಡಿ ಅವರಿಗೆ 329-329ಎ ಕೊಠಡಿ ನೀಡಲಾಗಿದೆ.