Home ಕರ್ನಾಟಕ From Tomorrow Property Registration Fee Doubles in Karnataka: ಕರ್ನಾಟಕದಲ್ಲಿ ನಾಳೆಯಿಂದ ಆಸ್ತಿ ನೋಂದಣಿ...

From Tomorrow Property Registration Fee Doubles in Karnataka: ಕರ್ನಾಟಕದಲ್ಲಿ ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಡಬಲ್ – ಆಸ್ತಿ ಖರೀದಿದಾರರು ಮತ್ತು ರಿಯಲ್ ಎಸ್ಟೇಟ್‌ಗೆ ದೊಡ್ಡ ಹೊಡೆತ

56
0
From Tomorrow Property Registration Fee Doubles in Karnataka

ಬೆಂಗಳೂರು: ಕರ್ನಾಟಕ ಸರ್ಕಾರ ನಾಳೆ (ಆಗಸ್ಟ್ 31, 2025)ರಿಂದ ಆಸ್ತಿ ನೋಂದಣಿ ಶುಲ್ಕವನ್ನು ಶೇಕಡಾ 1ರಿಂದ ಶೇಕಡಾ 2ಕ್ಕೆ ಡಬಲ್ ಮಾಡುವಂತೆ ಆದೇಶ ಹೊರಡಿಸಿದೆ. ಇದರಿಂದ ರಾಜ್ಯದ ಆಸ್ತಿ ಖರೀದಿದಾರರು, ಮಾಲೀಕರು ಹಾಗೂ ರಿಯಲ್ ಎಸ್ಟೇಟ್ ವಲಯಕ್ಕೆ ನೇರ ಹೊಡೆತ ಬಿದ್ದಿದೆ.

ಪ್ರಸ್ತುತ ಕರ್ನಾಟಕದಲ್ಲಿ ಆಸ್ತಿ ಖರೀದಿಸುವಾಗ ಮುದ್ರಾಂಕ ಶುಲ್ಕ 5% + ನೋಂದಣಿ ಶುಲ್ಕ 1% + ಇತರೆ ಸೆಸ್ ಸೇರಿ ಒಟ್ಟು 6.6% ವಸೂಲಿ ಮಾಡಲಾಗುತ್ತಿತ್ತು. ಆದರೆ ನಾಳೆಯಿಂದ ಇದು 7.6% ಆಗಲಿದೆ. ಹೀಗಾಗಿ ಆಸ್ತಿ ಖರೀದಿದಾರರು ಒಂದು ಲಕ್ಷ ರೂ. ಮೌಲ್ಯದ ಆಸ್ತಿ ನೋಂದಣಿಗೆ ಈಗಾಗಲೇ 1000 ರೂ. ಪಾವತಿಸುತ್ತಿದ್ದರೆ, ನಾಳೆಯಿಂದ 2000 ರೂ. ಪಾವತಿಸಬೇಕಾಗುತ್ತದೆ.

ಇತರ ರಾಜ್ಯಗಳೊಂದಿಗೆ ಸಮೀಕರಣ

ಅಧಿಕಾರಿಗಳ ಪ್ರಕಾರ ಈ ಪರಿಷ್ಕರಣೆ ಅಡ್ಮಿನಿಸ್ಟ್ರೇಟಿವ್ ಪ್ರಕ್ರಿಯೆ ಬಲಪಡಿಸಲು ಹಾಗೂ ಸೇವಾ ವಿತರಣೆಯನ್ನು ಸುಧಾರಿಸಲು ಕೈಗೊಂಡಿದೆ.

  • ತಮಿಳುನಾಡು: 9%
  • ಕೇರಳ: 10%
  • ಆಂಧ್ರ ಪ್ರದೇಶ: 7.5%
  • ತೆಲಂಗಾಣ: 7.5%
    ಇವುಗಳೊಂದಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದರ ಕಡಿಮೆ ಇತ್ತು, ಇದೀಗ ಸಮೀಕರಿಸಲಾಗಿದೆ.

ಅರ್ಜಿದಾರರಿಗೆ ಮಾರ್ಗಸೂಚಿ

  1. ಹಿಂದಿನ ಅಪಾಯಿಂಟ್ಮೆಂಟ್ ಪಡೆದವರು: ಈಗಾಗಲೇ ಹಳೆಯ ಶುಲ್ಕ ಪಾವತಿಸಿದವರು ವ್ಯತ್ಯಾಸದ ಮೊತ್ತವನ್ನು ಕಾವೇರಿ ಆನ್ಲೈನ್ ಪೋರ್ಟಲ್ ಮೂಲಕ ಪಾವತಿಸಬೇಕು. ಅವರಿಗೆ SMS ಮೂಲಕ ಸೂಚನೆ ನೀಡಲಾಗುತ್ತದೆ.
  2. ಪರಿಶೀಲನೆಯಲ್ಲಿರುವ ಅರ್ಜಿಗಳು: ಈಗಾಗಲೇ ಸಲ್ಲಿಸಿದ ಮತ್ತು ಪರಿಶೀಲನೆಯಲ್ಲಿರುವ ದಾಖಲೆಗಳಿಗೆ ಹೊಸ ಶೇಕಡಾ 2ರಂತೆ ಮರು ಲೆಕ್ಕ ಹಾಕಲಾಗುವುದು. ಪಾವತಿ ಪೂರ್ಣಗೊಳಿಸಿದ ಬಳಿಕವೇ ನೋಂದಣಿ ಪ್ರಕ್ರಿಯೆ ಮುಗಿಯುತ್ತದೆ.
From Tomorrow Property Registration Fee Doubles in Karnataka
From Tomorrow Property Registration Fee Doubles in Karnataka

ಜನರ ಪ್ರತಿಕ್ರಿಯೆ: ಡಬಲ್ ಶಾಕ್

ನೋಂದಣಿ ಶುಲ್ಕ ದಿಡೀರ್ ಏರಿಕೆಯಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈಗಾಗಲೇ ಬೆಲೆ ಏರಿಕೆ, ನಿರ್ಮಾಣ ವೆಚ್ಚ ಜಾಸ್ತಿ… ಈಗ ಶುಲ್ಕ ಡಬಲ್ ಮಾಡಿದ್ರೆ ಆಸ್ತಿ ಖರೀದಿ ಇನ್ನೂ ಕಷ್ಟವಾಗುತ್ತದೆ,” ಎಂದು ಖರೀದಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read: Karnataka Doubles Property Registration Fee from August 31; Real Estate, Property Owners Hit Hard

ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ಈ ನಿರ್ಧಾರ GPA, JDA ಹಾಗೂ ಬಲ್ಕ್ ಪ್ರಾಪರ್ಟಿ ವ್ಯವಹಾರಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ನಡುವೆ ಕಾವೇರಿ ಸಾಫ್ಟ್‌ವೇರ್ ತಾಂತ್ರಿಕ ಸಮಸ್ಯೆಗಳಿಂದ ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ದೀರ್ಘ ಸಾಲು ಕಂಡುಬಂದಿದೆ. ಸರ್ವರ್ ಸಮಸ್ಯೆಯಿಂದ ಜನರು ತತ್ತರಿಸಿದ್ದು, “ಶುಲ್ಕ ಹೆಚ್ಚಿಸೋಕೆ ಮುಂಚೆ ಸೌಲಭ್ಯಗಳನ್ನು ಸುಧಾರಿಸಲಿ” ಎಂದು ಬೇಡಿಕೆ ಇಟ್ಟಿದ್ದಾರೆ.

LEAVE A REPLY

Please enter your comment!
Please enter your name here