Home Uncategorized Gadag Breaking; ಅನ್ನಭಾಗ್ಯ ಅಕ್ಕಿ ಮೇಲೆ ಖದೀಮರ ಕಣ್ಣು – ಅಕ್ರಮ ಸಂಗ್ರಹ, ಸಾಗಾಟ

Gadag Breaking; ಅನ್ನಭಾಗ್ಯ ಅಕ್ಕಿ ಮೇಲೆ ಖದೀಮರ ಕಣ್ಣು – ಅಕ್ರಮ ಸಂಗ್ರಹ, ಸಾಗಾಟ

28
0

ಗದಗ;- ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿ ಮೇಲೆ ಖದೀಮರ ಕಣ್ಣು ಬಿದ್ದಿದೆ. ಅನೇಕ ಕಡೆ ಅಕ್ಕಿಯನ್ನು ಅಕ್ರಮ ಸಂಗ್ರಹ ಹಾಗೂ ಸಾಗಾಟ ಮಾಡಲಾಗುತ್ತಿದೆ.

ಹೌದು, ಗದಗ ಜಿಲ್ಲೆಯಲ್ಲಿ‌ ಅನ್ನಭಾಗ್ಯ ಅಕ್ರಮ‌ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಎರಡು ದಿನದಲ್ಲಿ ಮೂರು ಕಡೆ ದಾಳಿ ಮಾಡಿರುವ ಅಧಿಕಾರಿಗಳು, ಅಪಾರ ಪ್ರಮಾಣದ ಅಕ್ರಮ ಅನ್ನಭಾಗ್ಯ ಅಕ್ಕಿ ವಶ ಪಡೆಯಲಾಗಿದೆ.

ಕಳೆದ 15 ದಿನಗಳ ಅಂತರದಲ್ಲಿ 4 ಕಡೆ ಅನ್ನಭಾಗ್ಯ ಅಕ್ರಮ ಅಕ್ಕಿ ಸೀಜ್ ಮಾಡಲಾಗಿದೆ. ಬೆಟಗೇರಿಯ ಸೆಟ್ಲಮೆಂಟ್ 1 ನೇ ಕ್ರಾಸ್ ರಸ್ತೆಯಲ್ಲಿ KA26 B2218 ನಂಬರಿನ ಟಾಟಾ ಇಂಟ್ರಾ ವಾಹನದಲ್ಲಿ ಸಾಗಿಸಲಾಗ್ತಿದ್ದ ಅಂದಾಜು 36 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಗದಗ ತಾಲೂಕಿನ ಬೆನಕೊಪ್ಪ ಕ್ರಾಸ್ ಬಳಿ ನಂಬರ್ ಇಲ್ಲದ ಟಾಟಾ ಇಂಟ್ರಾ ವಾಹನದಲ್ಲಿ ಸಾಗಿಸಲಾಗ್ತಿದ್ದ ಅಂದಾಜು 32 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ.

ಮುಂಡರಗಿ ಪಟ್ಟಣದ ವೀರೇಶ್ ಬಡಿಗೇರ್ ಎನ್ನೋರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 39 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಪೊಲೀಸ್,ಆಹಾರ ಇಲಾಖೆ‌ ಅಧಿಕಾರಿಗಳು ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಬೆಟಗೇರಿ, ಗದಗ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

The post Gadag Breaking; ಅನ್ನಭಾಗ್ಯ ಅಕ್ಕಿ ಮೇಲೆ ಖದೀಮರ ಕಣ್ಣು – ಅಕ್ರಮ ಸಂಗ್ರಹ, ಸಾಗಾಟ appeared first on Ain Live News.

LEAVE A REPLY

Please enter your comment!
Please enter your name here