Home ಕರ್ನಾಟಕ GAIL ಸಿ ಎನ್ ಜಿ ದರದಲ್ಲಿ 2.50 ರೂ. ಕಡಿತ

GAIL ಸಿ ಎನ್ ಜಿ ದರದಲ್ಲಿ 2.50 ರೂ. ಕಡಿತ

48
0

ಹೊಸದಿಲ್ಲಿ : ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳ ಮೇಲೆ ದರಕಡಿತವನ್ನು ಕೇಂದ್ರ ಸರಕಾರ ಘೋಷಿಸಿದ ಬೆನ್ನಲ್ಲೇ GAIL (ಇಂಡಿಯಾ) ಲಿಮಿಟೆಡ್ ಹಾಗೂ ಅದರ ಅಂಗಸಂಸ್ಥೆ GAIL ಗ್ಯಾಸ್ ಲಿಮಿಟೆಡ್, ಸಂಕುಚಿತ ನೈಸರ್ಗಿಕ ಅನಿಲ (ಸಿ ಎನ್ ಜಿ)ದ ದರ ಕಡಿತವನ್ನು ಪ್ರಕಟಿಸಿದೆ. ಸಿ ಎನ್ ಜಿ ದರವನ್ನು ಪ್ರತಿ ಕೆ.ಜಿ.ಗೆ 2.50 ರೂ. ಕಡಿತಗೊಳಿಸುವುದಾಗಿ ಅದು ತಿಳಿಸಿದೆ.

ನೂತನ ದರಕಡಿತವು ಎಲ್ಲಾ GAIL ಹಾಗೂ GAIL ಗ್ಯಾಸ್ ಸಂಸ್ಥೆಗಳಿಗೆ ಸೇರಿ ಸಿ ಎನ್ ಜಿ ವಿತರಣಾ ಕೇಂದ್ರಗಳಲ್ಲಿ ಅನ್ವಯಿಸುತ್ತದೆ ಎಂದರು.

ಪರಿಶುದ್ಧ ಇಂಧನದ ಅಳವಡಿಕೆಯನ್ನು ಉತ್ತೇಜಿಸಲು ಹಾಗೂ ಗ್ರಾಹಕರಿಗೆ ಸಿ ಎನ್ ಜಿಯು ಹೆಚ್ಚು ಆಕರ್ಷಣೀಯ ಆಯ್ಕೆಯಾಗುವಂತೆ ಮಾಡಲು ಮತ್ತು ಸುಸ್ಥಿರವಾದ ಸಾರಿಗೆ ವ್ಯವಸ್ಥೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದರಕಡಿತವನ್ನು ಘೋಷಿಸಲಾಗಿದೆಯೆಂದು GAIL ಗ್ಯಾಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯಕಾರಿ ನಿರ್ದೇಶಕ (ಸಿಜಿಡಿ) ತಿಳಿಸಿದ್ದಾರೆ.

ನೂತನ ದರ ಪರಿಷ್ಕರಣೆಯೊಂದಿಗೆ ವಾರಣಾಸಿಯಲ್ಲಿ ಸಿ ಎನ್ ಜಿ ದರವು ಪ್ರತಿ ಕೆ.ಜಿ.ಗೆ 81.17 ರೂ., ಪಾಟ್ನಾದಲ್ಲಿ, 84.54 ರೂ., ರಾಂಚಿಯಲ್ಲಿ 87.15 ರೂ., ಜಮಶೆಡ್ಪುರದಲ್ಲಿ 87.08 ರೂ., ಭುವನೇಶ್ವರದಲ್ಲಿ 87.26 ರೂ. ಹಾಗೂ ಕಟಕ್ ನಲ್ಲಿ 87.60 ರೂ. ಆಗಿದೆ.

LEAVE A REPLY

Please enter your comment!
Please enter your name here