ಬೆಂಗಳೂರು:
ಈ ಬಾರಿಯ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿಸಿ ಸಂಭ್ರಮಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನರಲ್ಲಿ ಮನವಿ ಮಾಡಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆಯಲ್ಲಿ: “ಜಲಮೂಲಗಳ ಸಂರಕ್ಷಣೆಯ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಪಿಒಪಿ ಇಂದ ತಯಾರಿಸಿದ, ಭಾರಲೋಹಯುಕ್ತ ಬಣ್ಣದಿಂದ ಅಲಂಕರಿಸಿದ ಗಣೇಶನ ವಿಗ್ರಹಗಳ ಮಾರಾಟ ಮತ್ತು ನೀರಿನಲ್ಲಿ ವಿಸರ್ಜನೆ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ಆದೇಶ ನೀಡಿದೆ. ಜಲಚರಗಳ ಜೀವ ರಕ್ಷಣೆ, ನೀರಿನ ಆಕರಗಳ ಸಂರಕ್ಷಣೆಯ ಹೊಣೆಯನ್ನು ಅರಿತು ಮಣ್ಣಿನ ಗಣಪತಿಯನ್ನಷ್ಟೇ ಪೂಜಿಸೋಣ.ಈ ಬಾರಿಯ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿಸಿ ಸಂಭ್ರಮಿಸೋಣ ಎಂದು ಕರೆ ನೀಡಿದ್ದಾರೆ,” ಎಂದು ತಿಳಿಸಿದ್ದಾರೆ.
ಜಲಮೂಲಗಳ ಸಂರಕ್ಷಣೆಯ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಪಿಒಪಿ ಇಂದ ತಯಾರಿಸಿದ, ಭಾರಲೋಹಯುಕ್ತ ಬಣ್ಣದಿಂದ ಅಲಂಕರಿಸಿದ ಗಣೇಶನ ವಿಗ್ರಹಗಳ ಮಾರಾಟ ಮತ್ತು ನೀರಿನಲ್ಲಿ ವಿಸರ್ಜನೆ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ಆದೇಶ ನೀಡಿದೆ. ಜಲಚರಗಳ ಜೀವ ರಕ್ಷಣೆ, ನೀರಿನ ಆಕರಗಳ ಸಂರಕ್ಷಣೆಯ ಹೊಣೆಯನ್ನು ಅರಿತು ಮಣ್ಣಿನ… pic.twitter.com/G0kUr2T47L
— CM of Karnataka (@CMofKarnataka) September 17, 2023