ಬೆಂಗಳೂರು:
ಆಟವಾಡುತ್ತಿದ್ದ ವೇಳೆ ಆಯತಪ್ಪಿ ಈಜುಕೊಳದಲ್ಲಿ ಬಿದ್ದು ಬಾಲಕಿ ಮೃತಪಟ್ಟ ಘಟನೆ ಇಲ್ಲಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಡಿ.28ರ ಗುರುವಾರ ಸಂಜೆ ವೇಳೆಗೆ ಅಪಾರ್ಟ್ ಮೆಂಟ್ ನ ಸ್ವಿಮ್ಮಿಂಗ್ ಪೂಲ್ ಬಳಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದಿದ್ದಾಳೆ. ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಆಕೆಯನ್ನು ಕೆಲವರು ಗಮನಿಸಿ, ಕೂಡಲೇ ಸಹಾಯಕ್ಕೆ ದೌಡಾಯಿಸಿದ್ದಾರೆ. ಬಳಿಕ ಈಜುಕೊಳದಿಂದ ಮೇಲಕ್ಕೆತ್ತಿ ಹೊರತಂದಿದ್ದಾರೆ.
ಆದರೆ, ಬಾಲಕಿ ನೀರಿನಲ್ಲಿ ಬಿದ್ದಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದಳು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಘಟನೆ ಕುರಿತು ಮೃತಳ ತಂದೆ ರಾಜೇಶ್ ದೂರು ನೀಡಿದ್ದಾರೆ. ಸದ್ಯ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಬಾಲಕಿ ಸಾವಿಗೂ ಮುನ್ನ ಸಿಮ್ಮಿಂಗ್ ಪೂಲ್ ಬಳಿ ಹೋಗುವ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
#Karnataka #Bengaluru
— Express Bengaluru (@IEBengaluru) December 29, 2023
We want justice. Till now no one is held responsible for my daughter death. I don't want any parents to go through this, says, Rajesh Kumar Damerla whose daughter died in a swimming pool in prestige lakeside habitat apartment. Electrocution suspected. pic.twitter.com/KEiljmXLmo
#Karnataka#Bengaluru
— Express Bengaluru (@IEBengaluru) December 29, 2023
10 year old girl drowning in #prestige lakeside habitat apartment swimming pool incident
Varthur police have registered a case of unnatural death and are further probing: @dcpwhitefield pic.twitter.com/7kUxyRW210
Also Read: 9-year-old girl found dead in swimming pool of apartment complex in Bengaluru