ಬೆಂಗಳೂರು: ಭಾರತೀಯ ಜನತಾ ಪಕ್ಷದ ಸಂಸದ ತೇಜಸ್ವಿ ಸೂರ್ಯ ಅವರು ಅಮೆರಿಕದ ಭಾರತ ರಾಯಭಾರಿ ಎಚ್.ಇ. ಸೆರ್ಜಿೊ ಗರ್ ಅವರನ್ನು ಬೆಂಗಳೂರಿನಲ್ಲಿ ಸ್ವಾಗತಿಸಿದರು. ಈ ವೇಳೆ ಇಂಡಿಯಾ–ಅಮೆರಿಕಾ ಆರ್ಥಿಕ ಹಾಗೂ ತಂತ್ರಜ್ಞಾನ ಸಹಕಾರ ವೃದ್ಧಿಗೆ ಸಂಬಂಧಿಸಿದ ಮಹತ್ವದ ಚರ್ಚೆಗಳು ನಡೆದವು.
ಇಂದಿರಾನಗರದ ಫಿಲ್ಟರ್ ಕಾಫಿ ಹೋಟೆಲ್ನಲ್ಲಿ ಮಸಾಲ ದೋಸೆ ಮತ್ತು ಫಿಲ್ಟರ್ ಕಾಫಿ ಜೊತೆಗೆ ನಡೆದ ಈ ಅನೌಪಚಾರಿಕ ಮಾತುಕತೆಯಲ್ಲಿ, ಇತ್ತೀಚೆಗೆ ನಡೆದ ತಾತ್ಕಾಲಿಕ ವಾಣಿಜ್ಯ ಒಪ್ಪಂದದ ಹಿನ್ನೆಲೆ ಇಂಡಿಯಾ–ಯುಎಸ್ ಸಂಬಂಧಗಳ ವಿಸ್ತರಣೆ, ತಂತ್ರಜ್ಞಾನ, ವಾಣಿಜ್ಯ ಮತ್ತು ನವೋದ್ಯಮ (ಇನೋವೇಶನ್) ಕ್ಷೇತ್ರಗಳ ಕುರಿತು ಚರ್ಚಿಸಲಾಯಿತು.
ತೇಜಸ್ವಿ ಸೂರ್ಯ ಅವರು ರಾಯಭಾರಿಗೆ “ನಮ್ಮ ಆಟೋ” ಪರಿಚಯಿಸಿ, ಸ್ವಲ್ಪ ಸಮಯ ಆಟೋ ಸವಾರಿ ಮಾಡಿಸಿದರು. ಈ ಅನುಭವವನ್ನು “ಮೆಮೊರೇಬಲ್ ರೈಡ್” ಎಂದು ಅವರು ವಿವರಿಸಿದರು.
ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ನಲ್ಲಿ ಸೂರ್ಯ ಅವರು “ಮಸಾಲ ದೋಸೆಯಿಂದ ಮೆಷಿನ್ ಲರ್ನಿಂಗ್ವರೆಗೆ” ಎಂಬ ಪದಗಳಿಂದ ಬೆಂಗಳೂರಿನ ವೈಶಿಷ್ಟ್ಯವನ್ನು ವಿವರಿಸಿ, ಸಂಪ್ರದಾಯ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಟ್ಟುಗೂಡಿಸಿರುವ ನಗರವೆಂದು ಶ್ಲಾಘಿಸಿದರು.
Bengaluru truly represents the journey from masala dosa to machine learning, blending tradition with cutting-edge innovation and plays a vital role in strengthening economic and people to people ties between our two democracies.
— Tejasvi Surya (@Tejasvi_Surya) February 16, 2026
With over 700 American companies and 43% of… pic.twitter.com/orLeEm9nIX
ಬೆಂಗಳೂರಿನಲ್ಲಿ 700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತದ ಒಟ್ಟು ಸಾಫ್ಟ್ವೇರ್ ರಫ್ತಿನಲ್ಲಿ 43% ಪಾಲು ಹೊಂದಿದೆ. ಜೊತೆಗೆ, ದೇಶದ ಒಟ್ಟು ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ಗಳಲ್ಲಿ ಸುಮಾರು 40% ಬೆಂಗಳೂರಿನಲ್ಲಿ ಇರುವುದನ್ನು ಅವರು ಉಲ್ಲೇಖಿಸಿದರು.
ಇಂಡಿಯಾ–ಅಮೆರಿಕಾ ಆರ್ಥಿಕ ಹಾಗೂ ಜನರಿಂದ ಜನರಿಗೆ ಇರುವ ಸಂಬಂಧಗಳ ಬಲವರ್ಧನೆಗೆ ಬೆಂಗಳೂರು ಪ್ರಮುಖ ಕೇಂದ್ರವಾಗಿದ್ದು, ಭವಿಷ್ಯದ ಇನೋವೇಶನ್ ಆಧಾರಿತ ಸಹಕಾರಕ್ಕೆ ನಗರ ಮತ್ತಷ್ಟು ವೇಗ ನೀಡಲಿದೆ ಎಂದು ಸೂರ್ಯ ತಿಳಿಸಿದ್ದಾರೆ.
