Home ಅಪರಾಧ Gold biscuit worth Rs 12.46 lakhs seized from a boy| ಬಾಲಕನಿಂದ 12.46...

Gold biscuit worth Rs 12.46 lakhs seized from a boy| ಬಾಲಕನಿಂದ 12.46 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕೆಟ್ ವಶ

22
0
CISF

ಬೆಂಗಳೂರು:

ತಾನು ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬಳಿಯಿಂದ 12.46ಲಕ್ಷ ರೂ. ಮೌಲ್ಯದ ಎರಡು ಚಿನ್ನದ ಬಿಸ್ಕೆಟ್‍ಗಳನ್ನು (gold biscuit) ಕದ್ದೊಯ್ದ ಅಪ್ರಾಪ್ತ ಬಾಲಕನನ್ನು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಸಿಬ್ಬಂದಿ ಬಂಧಿಸಿರುವುದಾಗಿ ವರದಿಯಾಗಿದೆ.

ಚಿನ್ನದ ಬಿಸ್ಕೆಟ್ ಜೊತೆ ಜ.25ರಂದು ಬೆಂಗಳೂರು ಬಿಟ್ಟು ಹೊರಡಲು ಸಂಚು ರೂಪಿಸುತ್ತಿದ್ದಾಗ ಆರೋಪಿಯು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಾಲಕ ತನ್ನ ಪಾದರಕ್ಷೆಯಲ್ಲಿ ಬಿಸ್ಕೆಟ್ ಗಳನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.

ಸಿಐಎಸ್‍ಎಫ್ ಸಬ್‍ ಇನ್‍ಸ್ಪೆಕ್ಟರ್ ದೀಪಕ್ ತನ್ವರ್ ನೀಡಿದ ದೂರಿನ ಮೇರೆಗೆ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಬಾಲಕ ರಾಜಸ್ಥಾನ ಮೂಲದವನಾಗಿದ್ದು, ಜನವರಿ 25 ರಂದು ಇಂಡಿಗೋ ವಿಮಾನದ (6ಇ 586) ಮೂಲಕ ಅಹಮದಾಬಾದ್‍ಗೆ ತೆರಳಲು ಯೋಚಿಸಿದ್ದನು. ಮುಂಜಾನೆ 1.15ರ ಸುಮಾರಿಗೆ ಭದ್ರತಾ ತಪಾಸಣೆಯ ಸಮಯದಲ್ಲಿ, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಅಲಾರಾಂ ಹೊಡೆಯಿತು. ಬಾಲಕ ತಾನು ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬಳಿಯಿಂದ ಎರಡು ಚಿನ್ನದ ಬಿಸ್ಕೆಟ್‍ಗಳನ್ನು ಕದ್ದೊಯ್ದಿರುವುದಾಗಿ ವಿಚಾರಣೆಯಲ್ಲಿ ಗೊತ್ತಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here