Home ಬೆಂಗಳೂರು ನಗರ ಮಾಂಸ ಪ್ರಿಯರಿಗೆ ಗುಡ್ ನ್ಯೂಸ್: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ಕುರಿ ಮಾಂಸ

ಮಾಂಸ ಪ್ರಿಯರಿಗೆ ಗುಡ್ ನ್ಯೂಸ್: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ಕುರಿ ಮಾಂಸ

41
0
Mutton

ಬೆಂಗಳೂರು, ಆಗಸ್ಟ್ 10, (ಕರ್ನಾಟಕ ವಾರ್ತೆ): 2024ನೇ ಜುಲೈ 26 ರಂದು ಸಂಜೆಯ ವೇಳೆಗೆ ಮಾಧ್ಯಮಗಳಲ್ಲಿ ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ರಾಜಸ್ಥಾನದಿಂದ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಸುದ್ದಿಗಳು ಭಿತ್ತರವಾಗಿರುತ್ತದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು‌ ಅಗತ್ಯ ಕ್ರಮಗಳನ್ನು ಕೈಗೊಂಡಿರುತ್ತದೆ.

ಆ ಪ್ರದೇಶ ವ್ಯಾಪ್ತಿಯ ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳು ರೈಲ್ವೆ ನಿಲ್ಯಾಣಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ಪರಿಶೀಲನೆ ಸಂದರ್ಭದಲ್ಲಿ ರಾಜಸ್ಥಾನದಿಂದ ಬಂದ ರೈಲಿನ ಮೂಲಕ ಸ್ವೀಕೃತವಾದ ಪಾರ್ಸೆಲ್‌ಗಳನ್ನು ನಿಲ್ದಾಣದ ಹೊರ ಆವರಣದಲ್ಲಿ ಸಾಗಾಣಿಕ ವಾಹನದಲ್ಲಿರಿಸಿರುವುದು ಕಂಡುಬಂದಿರುತ್ತದೆ. ಒಟ್ಟು 84 ಸಂಖ್ಯೆಯ ಪ್ರಾಣಿ ಮಾಂಸದ ಪಾರ್ಸೆಲ್‌ಗಳಿದ್ದು ಅವುಗಳಲ್ಲಿ ಕೆಲವು ಪಾರ್ಸೆಲ್‌ಗಳನ್ನು ಪರಿಶೀಲಿಸಲಾಗಿ ಪ್ರಾಣಿಯ ಮಾಂಸವಿರುವುದು ಕಂಡುಬಂದಿರುತ್ತದೆ. ಯಾವ ಪ್ರಾಣಿಯ ಮಾಂಸವೆಂದು ಖಚಿತಪಡಿಸಿಕೊಳ್ಳಲು ಮಾಂಸದ ಕಾನೂನಾತ್ಮಕ ಆಹಾರ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಸದರಿ ಮಾದರಿಯನ್ನು ಹೈದ್ರಾಬಾದ್‌ನಲ್ಲಿರುವ ICAR, National Meat Research Institute, Hyderabad ಸರ್ಕಾರಿ ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೊಳಪಡಿಸಲಾಗಿದ್ದು ವಿಶ್ಲೇಷಣಾ ವರದಿಯಲ್ಲಿ ಮಾಂಸವು S: Ovis aries (sheep) ನದು ಎಂದು ವರದಿಯಾಗಿರುತ್ತದೆ.

ಮಾಂಸ ಮತ್ತು ಮಾಂಸದ ಉತ್ಪನ್ನಗಳಿಗಾಗಿ ಮೈಕ್ರೋಬಯೋಲಾಜಿಕಲ್ ಪ್ಯಾರಾಮೀಟರ್‌ಗಳ Food Safety and Standards (Food Products Standards and Food Additives) ನಿಯಮಾವಳಿಗಳು, 2011 Appendix-8 ರಲ್ಲಿನ ಟೇಬಲ್ -5 ರಲ್ಲಿ ನಿರ್ದಿಷ್ಟಪಡಿಸಲಾಗಿದೆ ಮತ್ತು ಟೇಬಲ್ SA ರಲ್ಲಿ Process Hygiene Criteria ಗಳನ್ನು ನಿರ್ದಿಷ್ಟಪಡಿಸಲಾಗಿದ್ದು, ಸದರಿ ಟೇಬಲ್‌ನಲ್ಲಿ ಕಚ್ಚಾ/ಶೀಥಲೀಕರಿಸಿದ ಮಾಂಸವೂ ಸೇರಿದಂತೆ 1-5 ವರ್ಗಗಳ ಮಾಂಸ ಮತ್ತು ಮಾಂಸದ ಉತ್ಪನ್ನಗಳನ್ನು ಸೇವಿಸುವ ಮೊದಲು ಚೆನ್ನಾಗಿ ಬೇಯಿಸಿ ಬಳಸಬೇಕೆಂದು ತಿಳಿಸಲಾಗಿದೆ.

ಮುಂದುವರೆದು, ಸದರಿ ಮಾಂಸದ ಮೈಕ್ರೋಬಯೋಲಾಜಿಕಲ್ ಪ್ಯಾರಾಮೀಟರ್‌ಗಳ ಮಾನದಂಡಗಳನ್ನು ಗುಣಮಟ್ಟವನ್ನು ಪರೀಕ್ಷಿಸಲು FSSAI ಅಂಗೀಕೃತ, NABL ಮಾನ್ಯತೆ ಹೊಂದಿದ 03 ಪ್ರತ್ಯೇಕ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ.

03 ಪ್ರಯೋಗಾಲಯಗಳ ವಿಶ್ಲೇಷಣಾ ವರದಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೈಸೇರಿದ್ದು, ವಿಶ್ಲೇಷಣಾವರದಿಗಳನ್ವಯ ವಿಶ್ಲೇಷಣೆಗೊಳಪಡಿಸಲಾದ ಮಾಂಸದ ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿರುವುದಿಲ್ಲ.

ಎರಡು ಪ್ರಯೋಗಾಲಯಗಳ ವರದಿಗಳಲ್ಲಿ ಮಾಂಸದ ಮೈಕ್ರೋಬಯೋಲಾಜಿಕಲ್ ಪ್ಯಾರಾಮೀಟರ್‌ಗಳು Appendix-B ರಲ್ಲಿನ ಟೇಬಲ್ -5 ರಲ್ಲಿ ನಿರ್ದಿಷ್ಟ ಪಡಿಸಿದ ಮಾನದಂಡಗಳಿಗೆ ಅನುಗುಣವಾಗಿವೆ’ ಎಂದು ವರದಿಯಾಗಿರುತ್ತದೆ. ಒಂದು ಪ್ರಯೋಗಾಲಯದ ವರದಿಯಲ್ಲಿರುವ Ecoli ಬ್ಯಾಕ್ಷೀರಿಯಾ ಮಟ್ಟವು ಸದರಿ ಬ್ಯಾರಿಯಾಗೆ ಸಂಬಂಧಿಸಿದಂತೆ FSSAI ನಿರ್ಧಿಷ್ಟಪಡಿಸಿದ ಮೈಕ್ರೋಬಯೋಲಾಜಿಕಲ್ ಪ್ರಾರಾಮೀಟರ್ನನ ಮಾನದಂಡಕ್ಕಿಂತ ಹೆಚ್ಚಿರುವುದು ಕಂಡುಬಂದಿದ್ದು, ಇತರ ಮೈಕ್ರೋಬಯೋಲಾಜಿಕಲ್ ಪ್ಯಾರಾಮೀಟರ್‌ಗಳು Appendix-B ರಲ್ಲಿನ ಟೇಬಲ್-5 ರಲ್ಲಿ ನಿರ್ದಿಷ್ಟಪಡಿಸಿದ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ವರದಿಯಾಗಿರುತ್ತದೆ.

Ecoli ಬ್ಯಾಕ್ನಿರಿಯವು FSSAI ನಿಗದಿಪಡಿಸಿದ ಮೈಕ್ರೋಬಯೋಲಾಜಿಕಲ್ ಪ್ಯಾರಾಮೀಟರ್‌ಗಳ ಗುಣಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿರುವುದು ಕಸಾಯಿಖಾನೆ/ಸಾಗಾಣಿಕೆ ಸಂದರ್ಭದಲ್ಲಿನ ನೈರ್ಮಲ್ಯತೆಯ ಕೊರತೆಯಿಂದಾಗಿ ಕಂಡುಬರಬಹುದಾಗಿದ್ದು, Food Safety and Standards (Food Products Standards and Food Additives) ನಿಯಮಾವಳಿಗಳು, 2011 ರ Appendix-B ರಲ್ಲಿನ ಟೇಬಲ್-5 ರನ್ವಯ ಸದರಿ ಅಂಶವು ಮಾಂಸದ ಮಾರಾಟಕ್ಕೆ ಅಡ್ಡಿಯಾಗುವುದಿಲ್ಲ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here