Governor approves names of Sitaram, Umashree, Sudham Das for Karnataka Legislative Council post
ಬೆಂಗಳೂರು:
ದಲಿತ ಸಚಿವರ ತೀವ್ರ ವಿರೋಧದ ನಡುವೆಯೂ ವಿಧಾನಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಸರ್ಕಾರ ಶಿಫಾರಸು ಮಾಡಿದ್ದ ಮೂವರ ಹೆಸರುಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಅನುಮೋದನೆ ನೀಡಿದ್ದಾರೆ.
ಉಮಾಶ್ರೀ ಹೊರತುಪಡಿಸಿ ಸೀತಾರಾಂ, ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ದಲಿತ ಸಚಿವರು ಹಾಗೂ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ ಗೂ ಪತ್ರ ಬರೆದಿತ್ತು. ಇದೀಗ ದಲಿತ ಸಚಿವರು, ನಾಯಕರಿಗೆ ತೀವ್ರ ಹಿನ್ನಡೆಯಾದಂತಾಗಿದೆ.
ಸೀತಾರಾಂ ಮತ್ತು ಸುಧಾಮ್ ದಾಸ್ ಬದಲಿಗೆ ಬೇರೆ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ದಲಿತ ಸಚಿವರು ಒತ್ತಾಯಿಸಿದ್ದರು. ಇಷ್ಟೇ ಅಲ್ಲದೆ, ಇವರಿಬ್ಬರ ವಿರುದ್ಧ ರಾಜ್ಯಪಾಲರಿಗೂ ದೂರು ನೀಡಿದ್ದರು. ಇವೆಲ್ಲವನ್ನೂ ಮೀರಿ ಪರಿಷತ್ ಸ್ಥಾನ ಪಡೆಯುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ.
ಸೀತಾರಾಂ ಹಾಗೂ ಸುಧಾಮ್ ದಾಸ್ ಅವರನ್ನು ನಾಮನಿರ್ದೇಶ ಮಾಡುವುದನ್ನು ಪ್ರತಿಭಟಿಸಿ ದಲಿತ ಸಚಿವರು, ನಾಯಕರು ಹೈಕಮಾಂಡ್ಗೆ ಪತ್ರ ಬರೆದಿದ್ದರು. ಇವರಿಬ್ಬರ ಬದಲಿಗೆ ಬೇರೆ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಇಷ್ಟೇ ಅಲ್ಲದೆ, ಇವರಿಬ್ಬರ ವಿರುದ್ಧ ರಾಜ್ಯಪಾಲರಿಗೂ ದೂರು ನೀಡಿದ್ದರು. ಇವೆಲ್ಲವನ್ನೂ ಮೀರಿ ಪರಿಷತ್ ಸ್ಥಾನ ಪಡೆಯುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ.
