Home ಬೆಂಗಳೂರು ನಗರ ಗೃಹ ಜ್ಯೋತಿ (200 units) : ನಾಲ್ಕು ದಿನಗಳಲ್ಲಿ 12.51 ಲಕ್ಷ ಗ್ರಾಹಕರ ನೋಂದಣಿ

ಗೃಹ ಜ್ಯೋತಿ (200 units) : ನಾಲ್ಕು ದಿನಗಳಲ್ಲಿ 12.51 ಲಕ್ಷ ಗ್ರಾಹಕರ ನೋಂದಣಿ

52
0
Gruha Jyothi (200 units): Over 10,85,320 customers registered in four days
Gruha Jyothi (200 units): Over 10,85,320 customers registered in four days

ಬೆಂಗಳೂರು:

ʼಗೃಹ ಜ್ಯೋತಿʼ ನೋಂದಣಿ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಸಂಜೆ ವೇಳೆಗೆ ಒಟ್ಟು 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಯು ಜೂನ್‌ 18 ರಂದು ಆರಂಭಗೊಂಡಿತ್ತು. ಮೊದಲ ದಿನ – 96,305, ಎರಡನೆಯ ದಿನ- 3,34,845 ಮೂರನೇ ದಿನ ರಾತ್ರಿ ವೇಳೆಗೆ – 4,64,225 ಹಾಗೂ ನಾಲ್ಕನೇ ದಿನ (ಬುಧವಾರ) 3.56 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮಧ್ಯ ರಾತ್ರಿ 12 ಗಂಟೆಗೆ ಈ ಸಂಖ್ಯೆ 4.5 ಲಕ್ಷ ದಾಟುವ ನೀರಿಕ್ಷೆ ಇದೆ.

ನಾಳೆಯಿಂದ (ಗುರುವಾರ) ರಾಜ್ಯದ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪ್ರತ್ಯೇಕ ಲಿಂಕ್ ಅನ್ನು ನೀಡಲಾಗಿದೆ. ಹಾಗಾಗಿ ನಾಳೆಯಿಂದ ರಾಜ್ಯದ 2000 ವಿದ್ಯುಚ್ಛಕ್ತಿ ಕಚೇರಿಗಳು, ಗ್ರಾಮ ಪಂಚಾಯತಿಗಳು ಹಾಗು ನಾಡ ಕಛೇರಿಗಳಲ್ಲಿ ಪ್ರತ್ಯೇಕ ಲಿಂಕ್‌ ಮೂಲಕ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು.

ಹೊಸ ಲಿಂಕ್‌ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಿ, ಅದನ್ನೇ ಸಾರ್ವಜನಿಕರಿಗೆ ನೀಡಲು ನಿರ್ಧರಿಸಲಾಗಿದೆ.

200 ಯೂನಿಟ್‌ ವರೆಗಿನ ಉಚಿತ ವಿದ್ಯುತ್‌ ಪಡೆಯುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ನೋಂದಣಿ ಪ್ರಕ್ರಿಯೆಯಲ್ಲಿ ದಿನೇ ದಿನೇ ಏರಿಕೆ ಕಂಡುಬರುತ್ತಿದ್ದು, ಸಾರ್ವಜನಿಕರು ಯೋಜನೆಯ ಪ್ರಯೋಜನ ಪಡೆಯಲು ಭಾರೀ ಉತ್ಸುಕತೆ ತೋರುತ್ತಿದ್ದಾರೆ.

ಕರ್ನಾಟಕ ಒನ್‌, ಬೆಂಗಳೂರು ಒನ್‌ ಹಾಗು ಗ್ರಾಮ ಒನ್‌ ಜೊತೆಗೆ, ಸಾರ್ವಜನಿಕರು ತಮ್ಮ ಕಂಪ್ಯೂಟರ್‌, ಲ್ಯಾಪ್‌’ಟಾಪ್‌, ಮೊಬೈಲ್‌ ಫೋನ್‌ ಗಳಲ್ಲಿ ಹಾಗೂ ಕೆಲವು ವಿದ್ಯುತ್ ಕಚೇರಿಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿಪಡಿಸದ ಕಾರಣ ಗ್ರಾಹಕರು ಗಡಿಬಿಡಿಯಾಗದೇ, ಆತಂಕ ಪಡದೇ ಸೇವಾ ಸಿಂಧು ಪೋರ್ಟಲ್‌ https://sevasindhugs.karnataka.gov.in ಮೂಲಕ ನೋಂದಾಯಿಸಬಹುದು ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here