Home ಬೆಂಗಳೂರು ನಗರ ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾದ ಗಯಾನಾ ನಿಯೋಗ

ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾದ ಗಯಾನಾ ನಿಯೋಗ

12
0
Guyana Delegation meets Karnataka Higher Education Minister
ಗಯಾನಾದ `ಗೋಲ್’ ಸಂಸ್ಥೆಯ ನಿರ್ದೇಶಕ ಜಾಕೋಬ್ ಒಪಡೇಯಿ ಅವರು ಬುಧವಾರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ಕ್ಷಣ. ಜೊತೆಯಲ್ಲಿ ಜೈನ್ ವಿವಿ ನಿರ್ದೇಶಕ ಟಾಮ್ ಜೋಸೆಫ್ ಕೂಡ ಇದ್ದರು.

ಬೆಂಗಳೂರು:

ಗಯಾನಾ ದೇಶದಲ್ಲಿರುವ `ಗಯಾನಾ ಆನ್ ಲೈನ್ ಅಕಾಡೆಮಿ ಆಫ್ ಲರ್ನಿಂಗ್’ (ಗೋಲ್) ಸಂಸ್ಥೆಯ ನಿರ್ದೇಶಕ ಡಾ.ಜಾಕೋಬ್ ಒಪಡೇಯಿ ನೇತೃತ್ವದ ಉನ್ನತ ಮಟ್ಟದ ನಿಯೋಗವು ಬುಧವಾರ ಇಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿತು.

ಈ ಸಂದರ್ಭದಲ್ಲಿ, ಕರ್ನಾಟಕ ಸರಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಸೇರಿದಂತೆ ಉನ್ನತ ಶಿಕ್ಷಣ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ತೆಗೆದುಕೊಂಡಿರುವ ಹತ್ತು ಹಲವು ಉಪಕ್ರಮಗಳ ಬಗ್ಗೆ ನಿಯೋಗವು ಮೆಚ್ಚುಗೆ ವ್ಯಕ್ತಪಡಿಸಿತು.

ಅಲ್ಲದೆ, ಗಯಾನಾದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಸರಕಾರವು ತಮಗೆ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕು ಎಂದು ನಿಯೋಗದ ಪರವಾಗಿ ಜಾಕೇಬ್ ಮನವಿ ಮಾಡಿಕೊಂಡರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಶ್ವತ್ಥನಾರಾಯಣ ಅವರು, ಹಿಂದುಳಿದ ದೇಶವಾಗಿರುವ ಗಯಾನಾದ ಯುವಜನರ ಸಬಲೀಕರಣಕ್ಕೆ ರಾಜ್ಯ ಸರಕಾರವು ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

`ಗೋಲ್’ ಸಂಸ್ಥೆಯು ಬೆಂಗಳೂರಿನ ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ಪ್ರಕಾರ, ಜೈನ್ ವಿ.ವಿ.ವು ಗಯಾನಾದ ವಿದ್ಯಾರ್ಥಿಗಳಿಗೆ ಆನ್-ಲೈನ್ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣಗಳನ್ನು ಬೋಧಿಸುತ್ತಿದೆ ಎಂದು ನಿಯೋಗವು ವಿವರಿಸಿತು.

ಜೈನ್ ವಿವಿಯ ನಿರ್ದೇಶಕರೂ ಆದ ಅಂತರರಾಷ್ಟ್ರೀಯ ಕೌಶಲ ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಟಾಮ್ ಜೋಸೆಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here