ಟೆಲ್ ಅವಿವ್: ಹಮಾಸ್ ಉಗ್ರರ (Hamas Terrorists) ವಿರುದ್ಧ ಹೋರಾಡಲು ಸೇನೆಯೊಂದಿಗೆ ಇಸ್ರೇಲ್‍ನ (Israel) ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಸೇನೆಯೊಂದಿಗೆ ಕೈಜೋಡಿಸಿದ್ದಾರೆ. ಸೇನೆಯೊಂದಿಗೆ ಕಾರ್ಯಕ್ಕಿಳಿದು ಸೈನಿಕರೊಂದಿಗೆ ಆಪ್ತವಾಗಿ ಚರ್ಚಿಸಿದ್ದಾರೆ. ಬಳಿಕ ಹಮಾಸ್ ವಿರುದ್ಧದ ಸೇನೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಎಲ್ಲಾ ಹಮಾಸ್ ತಾಣಗಳಿಂದ ದೂರ ಹೋಗುವಂತೆ ಗಾಜಾ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಆ ನಗರವನ್ನು ಸಂಪೂರ್ಣವಾಗಿ ನಾಶ ಮಾಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ಇದರ ಸಲುವಾಗಿ ಸುಮಾರು ಹತ್ತು ಸಾವಿರ ಸಂಖ್ಯೆಯಷ್ಟು ಸೈನಿಕರು ಮುತ್ತಿಗೆ ಹಾಕಿದ್ದಾರೆ.
Home remedies: ಚಳಿಗಾಲದಲ್ಲಿ ಕಿವಿ ನೋವು ನಿವಾರಿಸಲು ಇಲ್ಲಿದೆ ಮನೆಮದ್ದು!
ಆಪರೇಷನ್ ಅಲ್-ಅಕ್ಸಾ ಎಂದು ಹೆಸರಿಟ್ಟು ಮುನ್ನುಗುತ್ತಿರುವ ಹಮಾಸ್ ಉಗ್ರರು ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಕೈಜೋಡಿಸುವಂತೆ ಕರೆ ನೀಡಿದ್ದಾರೆ. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನಾವು ಗೆಲುವಿನ ಅಂಚಿನಲ್ಲಿದೆ ಎಂದು ಘೋಷಿಸಿಕೊಂಡಿದ್ದಾನೆ. ಯುದ್ಧದಲ್ಲಿ (War) ಎರಡೂ ಕಡೆಗಳಲ್ಲಿ ಕನಿಷ್ಠ 1,200 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
The post Hamas Terrorists: ಸೈನಿಕರ ಜೊತೆ ಯುದ್ಧಭೂಮಿಗಿಳಿದ ಮಾಜಿ ಪ್ರಧಾನಿ appeared first on Ain Live News.