Home Uncategorized HDK Vs DKS: ಕೈ ಸರ್ಕಾರ ಬಗ್ಗೆ ಭವಿಷ್ಯ ನುಡಿದ ಮಾಜಿ ಸಿಎಂ HDK: ದಳಪತಿ...

HDK Vs DKS: ಕೈ ಸರ್ಕಾರ ಬಗ್ಗೆ ಭವಿಷ್ಯ ನುಡಿದ ಮಾಜಿ ಸಿಎಂ HDK: ದಳಪತಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ರಣಾಕ್ರೋಶ..

37
0

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಶ್ವಾಶತವಾಗಿ ತಿಹಾರ್ ಜೈಲಿಗೆ ಹೋಗ್ತಾರೆ.ಮುಂದಿನ ವರ್ಷ ಮತ್ತೆ ವಿಧಾನಸಭಾ ಚುನಾವಣೆ ನೆಡಯಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.ಕುಮಾರಸ್ವಾಮಿ ಜಡ್ಜ್ ಎಂದೇ ಕಾಂಗ್ರೆಸ್ ನಾಯಕರು ಹೆಚ್ಡಿಕೆಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದಳಪತಿ ಹಾಗೂ ಟ್ರಬಲ್ ಶೂಟರ್ ನಡುವಿನ ಮಾತಿನ ಸಮರದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

HD Kumaraswamy: ರಾಜ್ಯಕ್ಕೆ ವಿದ್ಯುತ್ ಸಂಕಷ್ಟ: ಶ್ವೇತಪತ್ರ ಹೊರಡಿಸಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಯೆಸ್, ಕಾಂಗ್ರೆಸ್ ಸರ್ಕಾರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೆಂಕಿಯುಗಳಿದ್ದಾರೆ.ನಿನ್ನೆ ನಡೆದ ರಾಮನಗರ ಕಾರ್ಯಕರ್ತರ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ರಾಜಕೀಯ ಭವಿಷ್ಯದ ಜತೆಗೆ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆ ದಳಪತಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ.

ರಾಮನಗರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ,ಮುಂದಿನ ವರ್ಷ ಮತ್ತೆ ವಿಧಾನಸಭಾ ಚುನಾವಣೆ ನಡೆಯಲಿದೆ.ಆಗ ಕನಕಪುರ ಕ್ಷೇತ್ರವನ್ನ ಜೆಡಿಎಸ್ ಗೆಲ್ಲಲಿದೆ.ಹೀಗಿರುವ ಹಾಲಿ ಶಾಸಕರು ತಿಹಾರ್ ಜೈಲಿಗೆ ಶಾಶ್ವತವಾಗಿ ಹೋಗಬಹುದು.ಚುನಾವಣೆಗೆ ನಿಲ್ಲೋದಕ್ಕೆ ಸಾಧ್ಯ ಆಗದೇ ಇರಬಹುದು ಎಂದಿದ್ದಾರೆ.ಮೈತ್ರಿ ಸರ್ಕಾರ ಬಿದ್ದಿದ್ದೆ ಇವರು ಹಾಗೂ ರಮೇಶ್ ಜಾರಕಿಹೊಳಿ ತಿಕ್ಕಾಟದಿಂದ ಎಂದು ಕನಕಪುರ ಬಂಡೆ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಕ್ ಪ್ರಹಾರ ನಡಸಿದ್ದಾರೆ.

ಇನ್ನು ದಳಪತಿ ಹೇಳಿಕೆಗೆ ಕನಕಪುರ ಬಂಡೆ ನಯವಾಗಿಯೇ ಕೌಂಟರ್ ಕೊಟ್ಟಿದ್ದಾರೆ.ಕುಮಾರಸ್ವಾಮಿ ಅವ್ರು ಪ್ಲಾನ್ ಏನಿದೆ ಎಂಬದು ಹೇಳಿದ್ದಾರೆ.ಈ ಹಿಂದೆ ಸಿಎಂ ಆಗಿದ್ದಾಗ,ನನ್ನ ತಮ್ಮ ತಂಗಿ,ಹೆಂಡತಿ ಮೇಲೆ ಕೇಸ್ ಹಾಕಿದ್ದನ್ನು ಈಗ ನೆನಪಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.ಇನ್ನು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇ, ಡಿ.ಕೆ.ಶಿವಕುಮಾರ್ ನ್ನ ತಿಹಾರ್ ಜೈಲಿಗೆ ಹಾಕೋದಕ್ಕಾ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಒಟ್ಟಾರೆ,ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾಯಕರ ಟಾಕ್ ಪೈಟ್ ಜೋರಾಗ್ತಿದೆ.ದಳಪತಿ ಹಾಗೂ ಬಂಡೆ ನಡುವೆ ಸ್ಪೋಟವಾಗಿರುವ ಕೋಲ್ಡ್ ವಾರ್ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

The post HDK Vs DKS: ಕೈ ಸರ್ಕಾರ ಬಗ್ಗೆ ಭವಿಷ್ಯ ನುಡಿದ ಮಾಜಿ ಸಿಎಂ HDK: ದಳಪತಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ರಣಾಕ್ರೋಶ.. appeared first on Ain Live News.

LEAVE A REPLY

Please enter your comment!
Please enter your name here